ಹಾವೇರಿ: ಜಿಲ್ಲೆಯ ಬ್ಯಾಡಗಿ ತಾಲೂಕಿನ ಗುಡ್ಡದಮಲ್ಲಾಪುರದ ಮೂಕಪ್ಪ ಶ್ರೀಗಳ ಮಠದ ಹಿರಿಯ ಮೂಕಪ್ಪ ಶಿವಾಚಾರ್ಯ ಸ್ವಾಮೀಜಿ ವಿಧಿವಶರಾಗಿದ್ದಾರೆ.
ವೃಷಭ ರೂಪಿ(ಎತ್ತು) ಸ್ವಾಮೀಜಿ ಕಳೆದ ಕೆಲವು ವರ್ಷಗಳಿಂದ ಮಠದ ಪೀಠಾಧಿಪತಿಯಾಗಿದ್ದರು. ಇಂದು ಮುಂಜಾನೆ ಸ್ವಾಮೀಜಿ ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಎಮ್ಮಿಗನೂರಿಗೆ ಭಕ್ತರ ಮನೆಗಳಿಗೆ ಪಾದ ಪೂಜೆಗೆ ತೆರಳಿದ್ದ ವೇಳೆ ಲಿಂಗೈಕ್ಯರಾಗಿದ್ದಾರೆ ಎನ್ನಲಾಗಿದೆ.
ಲಿಂಗೈಕ್ಯ ಹಿರಿಯ ಮೂಕಪ್ಪ ಶಿವಾಚಾರ್ಯ ಸ್ವಾಮೀಜಿಗಳ ಅಂತ್ಯಕ್ರಿಯೆ ನಾಳೆ ಬೆಳಿಗ್ಗೆ ಹತ್ತು ಗಂಟೆಗೆ ವೀರಶೈವ ಧಾರ್ಮಿಕ ವಿಧಿ ವಿಧಾನದಂತೆ ನಡೆಯಲಿದೆ ಎಂದು ತಿಳಿದು ಬಂದಿದೆ.