ETV Bharat / state

ತರಕಾರಿ ಮಾರುವುದರೊಂದಿಗೆ ಕೊರೊನಾ ಜಾಗೃತಿ ಮೂಡಿಸುತ್ತಿರುವ ಗ್ರಾಮ ಪಂಚಾಯತ್ ಸದಸ್ಯ - ಗ್ರಾಮ ಪಂಚಾಯತ್ ಸದಸ್ಯ ಶ್ರೀಕಾಂತ ಕೊಂಚಿಗೇರಿ

ಹಾನಗಲ್ ತಾಲೂಕಿನ ಆಡೂರು ಗ್ರಾಮ ಪಂಚಾಯತ್ ಸದಸ್ಯ ಶ್ರೀಕಾಂತ ಕೊಂಚಿಗೇರಿ ಅವರು ಸ್ವತಃ ತರಕಾರಿ ಮಾರುವುದರೊಂದಿಗೆ, ತರಕಾರಿ ಕೊಳ್ಳಲು ಬರುವ ಜನರಿಗೆ ಕೊರೊನಾ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.

GP  Member raising awareness on Corona
ಆಡೂರ ಗ್ರಾಮ ಪಂಚಾಯತ್ ಸದಸ್ಯ ಶ್ರೀಕಾಂತ ಕೊಂಚಿಗೇರಿ
author img

By

Published : Apr 22, 2020, 7:39 PM IST

ಹಾನಗಲ್: ಲಾಕ್ ಡೌನ್​ನಿಂದ ಗ್ರಾಮದಲ್ಲಿ ಪ್ರತಿ ಶನಿವಾರ ನಡೆಯುತ್ತಿದ್ದ ಸಂತೆ ರದ್ದಾಗಿದೆ. ಹಾಗಾಗಿ ಹಾನಗಲ್ ತಾಲೂಕು ಆಡೂರು ಗ್ರಾಮ ಪಂಚಾಯತ್ ಸದಸ್ಯ ಶ್ರೀಕಾಂತ ಕೊಂಚಿಗೇರಿ ಅವರು ಸ್ವತಃ ತಾವೇ ತರಕಾರಿ ಮಾರುವುದರೊಂದಿಗೆ ಜನರಿಗೆ ಕೊರೊನಾ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.

ಆಡೂರು ಗ್ರಾಮ ಪಂಚಾಯತ್ ಸದಸ್ಯ ಶ್ರೀಕಾಂತ ಕೊಂಚಿಗೇರಿ

ಈ ಬಗ್ಗೆ ಮಾತನಾಡಿದ ಅವರು, ಲಾಕ್​ಡೌನ್​ನಿಂದ ಗ್ರಾಮದ ಜನರಿಗೆ ತರಕಾರಿಗಳನ್ನ ಖರೀದಿಸುವುದು ತೊಂದರೆಯಾಗುತ್ತಿತ್ತು. ಅಲ್ಲದೇ ತರಕಾರಿ ಮಾರಲು ಬರುವ ವ್ಯಾಪಾರಸ್ಥರು ಹೆಚ್ಚಿನ ಬೆಲೆಗೆ ಮಾರುತ್ತಿದ್ದರು. ಹಾಗಾಗಿ ನಾನೇ ಮಾರ್ಕೆಟ್​ಗೆ ತೆರಳಿ ತರಕಾರಿಗಳನ್ನ ತಂದು ಸಾರ್ವಜನಿಕರಿಗೆ ನಿಗದಿತ ಬೆಲೆಗೆ ಮಾರುತ್ತಿದ್ದೇನೆ ಎಂದು ತಿಳಿಸಿದರು.

ಇನ್ನು ಇಲ್ಲಿ ತರಕಾರಿ ಕೊಳ್ಳಲು ಬರುವ ಜನರಿಗೆ ಕೊರೊನಾ ಬಗ್ಗೆ ಜಾಗೃತಿ ಮೂಡಿಸುವುದರ ಮೂಲಕ ಅವರಿಗೆ ಯಾವುದೇ ರೀತಿ ಹೊರೆಯಾಗದಂತೆ ತರಕಾರಿ ಮಾರುತ್ತಿರುವುದಾಗಿ ಗ್ರಾ.ಪಂ. ಸದಸ್ಯ ಶ್ರೀಕಾಂತ್​ ಹೇಳಿದ್ರು.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.