ETV Bharat / state

ಸರ್ಕಾರಿ ಕೆಲಸ ದುರುಪಯೋಗಪಡಿಸಿಕೊಂಡು ಜನರಿಗೆ ಲಕ್ಷಾಂತರ ರೂ. ವಂಚನೆ - ಪುರಸಭೆ ನೌಕರನಿಂದ ವಂಚನೆ ಪ್ರಕರಣ

ವಿಷಯ ತಿಳಿಯುತ್ತಿದ್ದಂತೆ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು ಅಧಿಕಾರಿಗಳ ಜೊತೆ ಸಭೆ ನಡೆಸಿ, ಮಹಾಂತೇಶ್ ಬಳಿಸಿದ ಬ್ಯಾಂಕ್ ಸೀಲ್ ವಶಪಡಿಸಿಕೊಂಡಿದ್ದಾರೆ. ಈ ಕುರಿತಂತೆ ಪ್ರಕರಣ ದಾಖಲಾಗಿದ್ದು, ಮಹಾಂತೇಶ್ ನಾಪತ್ತೆಯಾಗಿದ್ದಾನೆ. ವಂಚಕ ಎರಡು ಲಕ್ಷ ರೂ. ವಂಚಿಸಿರಬಹುದು ಎಂದು ಅಂದಾಜಿಸಲಾಗಿದೆ..

ಸರ್ಕಾರಿ ಕೆಲಸ ದುರುಪಯೋಗಪಡಿಸಿಕೊಂಡು ಜನರಿಗೆ ಲಕ್ಷಾಂತರ ರೂ. ವಂಚನೆ
Govt Municipality Employee Fraud case in Haveri
author img

By

Published : Feb 19, 2021, 7:37 AM IST

Updated : Feb 19, 2021, 8:54 AM IST

ಹಾವೇರಿ : ಸರ್ಕಾರಿ ಕೆಲಸ ಅಂದರೆ ದೇವರ ಕೆಲಸ. ಆದರೆ, ಇಲ್ಲೊಬ್ಬ ಸರ್ಕಾರಿ ನೌಕರ ತನ್ನ ಕೆಲಸವನ್ನೇ ದುರುಪಯೋಗಪಡಿಸಿಕೊಂಡು ಜನರಿಂದ ಲಕ್ಷಾಂತರ ರೂಪಾಯಿ ಲಪಟಾಯಿಸಿರುವ ಘಟನೆ ನಡೆದಿದೆ.

ಜಿಲ್ಲೆಯ ಶಿಗ್ಗಾಂವಿ ಪುರಸಭೆಯಲ್ಲಿ ಪ್ರಥಮ ದರ್ಜೆ ನೌಕರನಾಗಿ ಮಹಾಂತೇಶ್ ತಿಗಳಣ್ಣನವರ್ ಎಂಬಾತ ಕೆಲಸ ಮಾಡುತ್ತಿದ್ದ. ಇದಕ್ಕೂ ಮೊದಲು ಈತ ಪುರಸಭೆಯಲ್ಲಿ ಕಲೆಕ್ಟರ್ ​​ಸೇರಿ ವಿವಿಧ ಹುದ್ದೆಗಹಳಲ್ಲಿ ಕಾರ್ಯ ನಿರ್ವಹಿಸಿದ್ದ. ಸುಮಾರು ಹತ್ತು ವರ್ಷಗಳಿಂದ ಶಿಗ್ಗಾಂವಿ ಪುರಸಭೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಹಾಂತೇಶ್​​ ವಿರುದ್ಧ ಹಣ ವಂಚನೆ ಆರೋಪ ಕೇಳಿ ಬಂದಿದೆ.

ಜನರಿಗೆ ಲಕ್ಷಾಂತರ ರೂ ವಂಚನೆ ಮಾಡಿದ ಸರ್ಕಾರಿ ನೌಕರ

ವಂಚಕನಿಂದ ಅನಕ್ಷರಸ್ಥರೇ ಟಾರ್ಗೆಟ್: ಪುರಸಭೆಗೆ ನೀರಿನ, ವಿದ್ಯುತ್​ ಕರ ಸೇರಿ ವಿವಿಧ ಕರಗಳನ್ನು ತುಂಬಲು ಬರುತ್ತಿದ್ದ ಅನಕ್ಷರಸ್ಥರು ಮತ್ತು ಮುಗ್ದ ಜನರನ್ನು ಗುರಿಯಾಗಿಟ್ಟುಕೊಂಡ ಮಹಾಂತೇಶ್​​, ಅವರಿಂದ ಬ್ಯಾಂಕ್​ಗೆ ಕಟ್ಟುತ್ತೇನೆ ಎಂದು ಹೇಳಿ ಹಣ ಪಡೆಯುತ್ತಿದ್ದನಂತೆ. ಬಳಿಕ ಬ್ಯಾಂಕ್ ಮತ್ತು ಪುರಸಭೆಯ ನಕಲಿ ಮುದ್ರೆಗಳಿಂದ ಸೀಲ್ ಹಾಕಿ ಕರವನ್ನು ತುಂಬಿರುವುದಾಗಿ ಹೇಳಿ ವಾಪಸ್ ನೀಡುತ್ತಿದ್ದನಂತೆ.

ಎರಡು ಲಕ್ಷ ರೂ. ವಂಚನೆ : ವಂಚಕ ಮಹಾಂತೇಶ್ ಪುರಸಭೆಗೆ ಬರಬೇಕಿದ್ದ ಸುಮಾರು ಎರಡು ಲಕ್ಷ ರೂಪಾಯಿ ಆದಾಯ ವಂಚಿಸಿದ್ದಾನೆ. ಈ ಕುರಿತಂತೆ ಸ್ಥಳೀಯ ನಿವಾಸಿಯೊಬ್ಬರು ಕರ ತುಂಬಿದ ಬಿಲ್‌ನ ತೋರಿಸಿದಾಗ ಪುರಸಭೆ ಅಧಿಕಾರಿಗಳಿಗೆ ಸಂಶಯ ಬಂದಿದೆ.

Shigangvi Municipal Office
ಶಿಗ್ಗಾಂವಿ ಪುರಸಭೆ ಕಾರ್ಯಾಲಯ

ಈ ಕುರಿತಂತೆ ಬ್ಯಾಂಕ್ ಅಧಿಕಾರಿಗಳನ್ನು ಪ್ರಶ್ನಿಸಿದಾಗ ಮಹಾಂತೇಶ್ ಬ್ಯಾಂಕ್‌ ನಕಲಿ ಸೀಲ್ ಮಾಡಿಕೊಂಡು ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ಯಾವುದೇ ಕರಗಳನ್ನು ತುಂಬುವಾಗ ಸ್ಥಳೀಯರು ಅಧಿಕಾರಿಗಳಿಗೆ ಹಣ ನೀಡದಂತೆ ತಿಳಿಸಲಾಗಿದೆ. ಆದರೂ ಸಹ ಮಹಾಂತೇಶ್ ಟ್ಯಾಕ್ಸ್‌ ಕಡಿಮೆ ಮಾಡುವುದಾಗಿ ತಿಳಿಸಿ ವಂಚಿಸಿದ್ದಾನೆ.

ನಿವಾಸಿಗಳು ಈ ರೀತಿಯ ಕರ ತುಂಬುವಾಗ ಪುರಸಭೆಯ ಅಧಿಕಾರಿಗಳ ಕೈಯಲ್ಲಿ ನೀಡದೆ ತಾವೇ ಖುದ್ದು ಬ್ಯಾಂಕ್‌ಗೆ ತೆರಳಿ ಹಣ ತುಂಬಿ ರಶೀದಿ ಪಡೆಯುವಂತೆ ನಗರಸಭೆ ಸದಸ್ಯರು ಮನವಿ ಮಾಡಿದ್ದಾರೆ.

ಆರೋಪಿ ನಾಪತ್ತೆ : ವಿಷಯ ತಿಳಿಯುತ್ತಿದ್ದಂತೆ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು ಅಧಿಕಾರಿಗಳ ಜೊತೆ ಸಭೆ ನಡೆಸಿ, ಮಹಾಂತೇಶ್ ಬಳಿಸಿದ ಬ್ಯಾಂಕ್ ಸೀಲ್ ವಶಪಡಿಸಿಕೊಂಡಿದ್ದಾರೆ. ಈ ಕುರಿತಂತೆ ಪ್ರಕರಣ ದಾಖಲಾಗಿದ್ದು, ಮಹಾಂತೇಶ್ ನಾಪತ್ತೆಯಾಗಿದ್ದಾನೆ. ವಂಚಕ ಎರಡು ಲಕ್ಷ ರೂ. ವಂಚಿಸಿರಬಹುದು ಎಂದು ಅಂದಾಜಿಸಲಾಗಿದೆ. ತನಿಖೆ ಪೂರ್ಣಗೊಂಡ ಮೇಲಷ್ಟೇ ಸಂಪೂರ್ಣ ವಿವರ ತಿಳಿಯಲಿದೆ.

Last Updated : Feb 19, 2021, 8:54 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.