ಹಾವೇರಿ: ಕೊರೊನಾ ಸೋಂಕು ಹರಡುವುದನ್ನು ತಡೆಯಲು ಕರೆ ನೀಡಿರುವ ಭಾನುವಾರದ ಲಾಕ್ಡೌನ್ಗೆ ಹಾವೇರಿ ಜಿಲ್ಲೆಯಲ್ಲಿ ಉತ್ತಮ ಬೆಂಬಲ ವ್ಯಕ್ತವಾಗಿದೆ.
ಬೆಳಗ್ಗೆಯಿಂದಲೇ ಡಿವೈಎಸ್‌ಪಿ ವಿಜಯಕುಮಾರ್ ನೇತೃತ್ವದಲ್ಲಿ ರಸ್ತೆಗಿಳಿದಿರುವ ಪೊಲೀಸರು ಅನಗತ್ಯವಾಗಿ ಹೊರಗಡೆ ಓಡಾಡುತ್ತಿರುವವರಿಗೆ ದಂಡ ಹಾಕುತ್ತಿದ್ದಾರೆ.
ಜಿಲ್ಲೆಯಲ್ಲಿ ಲಾಕ್ಡೌನ್ಗೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದ್ದರೂ ಸಹ ಕೆಲವರು ಬೇಕಾಬಿಟ್ಟಿಯಾಗಿ ಮನೆಯಿಂದ ಹೊರಗಡೆ ಓಡಾಡ್ತಿದ್ದಾರೆ. ಬೈಕ್, ಕಾರುಗಳಲ್ಲಿ ಸುಮ್ಮನೆ ಹೊರಗಡೆ ಓಡಾಡುತ್ತಿರುವವರಿಗೆ ಪೊಲೀಸರು ಕ್ಲಾಸ್ ತೆಗೆದುಕೊಳ್ಳುವುದರ ಜೊತೆಗೆ 500, 200 ರೂಪಾಯಿ ದಂಡ ಹಾಕಿ ವಾಪಸ್ ಮನೆಗೆ ಕಳುಹಿಸುತ್ತಿದ್ದಾರೆ. ಇದರ ಜೊತೆಗೆ ಮನೆಯಲ್ಲೇ ಇದ್ದು ಕೊರೊನಾ ಸೋಂಕು ಹರಡುವುದನ್ನು ತಡೆಯಲು ಸಹಕರಿಸಿ ಎಂದು ಮನವಿ ಮಾಡುತ್ತಿದ್ದಾರೆ.