ಹಾವೇರಿ: ಭಾರತ ಲಾಕ್ಡೌನ್ ಮುಗಿಯಲು ಇನ್ನೂ 10 ದಿನ ಬಾಕಿ ಇವೆ. ಹಾವೇರಿ ಮಂದಿ ಲಾಕ್ಡೌನ್ ಆದೇಶ ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದಾರೆ.
ತರಕಾರಿ ಮಾರುಕಟ್ಟೆ, ದಿನಸಿ ಅಂಗಡಿ ಮತ್ತು ಹಾಲಿನಂಗಡಿಗಳಲ್ಲಿ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಇದರಿಂದಾಗಿ ಪೊಲೀಸರ ಕರ್ತವ್ಯಕ್ಕೆ ಸಹಕಾರ ಸಿಕ್ಕಂತಾಗಿದೆ. ದೇಶ ಆದಷ್ಟು ಬೇಗ ಮೊದಲಿನಂತಾಗಬೇಕು. ಅದಕ್ಕಾಗಿ ನಮ್ಮ ಸಹಕಾರ ಇದ್ದೇ ಇರುತ್ತದೆ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.