ಹಾವೇರಿ: ನೆರೆ ಸಂತ್ರಸ್ತರ ಹಣ ಬಿಡುಗಡೆಯಲ್ಲಿ ಗೋಲಮಾಲ್ ನಡೆದಿದೆ ಎಂಬ ಆರೋಪದ ಮೇಲೆ ಜಿಲ್ಲಾಧಿಕಾರಿಗಳು, ಜಿಲ್ಲೆಯ 6 ಗ್ರಾಮ ಪಂಚಾಯತಿಯ ಲೆಕ್ಕಾಧಿಕಾರಿಗಳನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ನೆರೆ ಪರಿಹಾರ ವಿತರಣೆಯಲ್ಲಿ ಅವ್ಯವಹಾರ ಆರೋಪದ ಮೇಲೆ ತಾಲೂಕಿನ ದೇವಗಿರಿ, ಕರ್ಜಿಗಿ, ಶಿಗ್ಗಾವಿ ತಾಲೂಕಿನ ಅತ್ತಿಗೇರಿ, ಅಂದಲಗಿ, ಕಬನೂರು ಮತ್ತು ಬನ್ನೂರಿನ ಗ್ರಾಮ ಲೆಕ್ಕಾಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಈ ಮಧ್ಯೆ ತಾಲೂಕಿನ ದೇವಗಿರಿ ಗ್ರಾಮವೊಂದರಲ್ಲಿ ಸುಮಾರು 51 ಪ್ರಕರಣಗಳು ಪತ್ತೆಯಾಗಿವೆ ಎನ್ನಲಾಗಿದೆ.
ಗ್ರಾಮದಲ್ಲಿ 51 ಫಲಾನುಭವಿಗಳಿಗೆ ಬಿಡುಗಡೆಯಾದ 34 ಲಕ್ಷ ರೂ.ಗಳನ್ನು ನಕಲಿ ಫಲಾನುಭವಿಗಳ ಹೆಸರಲ್ಲಿ ಪಡೆಯಲಾಗಿದೆ ಎಂಬ ಆರೋಪ ಸಹ ಕೇಳಿ ಬಂದಿದೆ.