ETV Bharat / state

ಗಂಧದ ಗುಡಿ ರಿಲೀಸ್: ಅಪ್ಪು ಅಭಿಮಾನಿಗಳ ಸಂಭ್ರಮಾಚರಣೆ - ಅಭಿಮಾನಿಗಳ ಸಂಭ್ರಮಾಚರಣೆ

ಇಂದು ನಟ ದಿ.ಪುನೀತ್ ರಾಜ್​​ಕುಮಾರ್ ಅವರ ಕನಸಿನ 'ಗಂಧದ ಗುಡಿ' ಚಿತ್ರ ಬಿಡುಗಡೆಯಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಹಲವು ಜಿಲ್ಲೆಗಳಿಲ್ಲಿ ಅಭಿಮಾನಿಗಳ ಸಂಭ್ರಮಾಚರಣೆ ಜೋರಾಗಿದೆ.

Gandhada Gudi Grand Release appu Fans Celebrations
ಗಂಧದ ಗುಡಿ ರಿಲೀಸ್: ಅಪ್ಪು ಅಭಿಮಾನಿಗಳ ಸಂಭ್ರಮಾಚರಣೆ
author img

By

Published : Oct 28, 2022, 1:39 PM IST

ಹಾವೇರಿ/ಕೋಲಾರ/ ಕೊಪ್ಪಳ: ಪುನೀತ್ ರಾಜ್​​ಕುಮಾರ್​ ಅಭಿನಯದ ಗಂಧದ ಗುಡಿ ಚಿತ್ರ ಬಿಡುಗಡೆ ಹಿನ್ನೆಲೆ ಹಾವೇರಿ ನಗರದ ಸರಸ್ವತಿ ಚಿತ್ರಮಂದಿರದ ಮುಂದೆ ಅಪ್ಪು ಅಭಿಮಾನಿಗಳು ಸಂಭ್ರಮಾಚರಣೆ ಮಾಡಿದ್ದಾರೆ.

ಗಂಧದ ಗುಡಿ ಚಿತ್ರದ ಬ್ಯಾನರ್​ಗೆ, ಹೂವು ಹಾಕಿ, ಹಾಲಿನ ಅಭಿಷೇಕ ಮಾಡಿ ಪಟಾಕಿ‌ ಸಿಡಿಸಿದ ಅಭಿಮಾನಿಗಳು ಚಿತ್ರಕ್ಕೆ ಶುಭವಾಗಲಿ ಎಂದು ಹಾರೈಸಿದರು. ಇನ್ನು ಕೆಲವು ಅಭಿಮಾನಿಗಳು ಮೈ ಮೇಲೆ ಹಚ್ಚೆ ಹಾಕಿಸಿಕೊಂಡು, ಟೀ ಶರ್ಟ್ ಮೇಲೆ ಗಂಧದ ಗುಡಿ ಚಿತ್ರದ ಹೆಸರು, ಪುನೀತ್ ಅವರ ಭಾವಚಿತ್ರ ಹಾಕಿಸಿಕೊಂಡು ಸಂಭ್ರಮಿಸಿದರು.

ಗಂಧದ ಗುಡಿ ರಿಲೀಸ್: ಅಪ್ಪು ಅಭಿಮಾನಿಗಳ ಸಂಭ್ರಮಾಚರಣೆ

ಇನ್ನು ಕೋಲಾರದ ಶಾರದ ಚಿತ್ರಮಂದಿರದ ಎದುರು ಸಹ ಅಭಿಮಾನಿಗಳ ಸಂಭ್ರಮಾಚರಣೆ ಜೋರಾಗಿತ್ತು. 'ಅಪ್ಪು ದೇವರುಗಳ ದೇವರು' ಎಂದು ಬಣ್ಣಿಸಿ, ಅಪ್ಪು ಫೋಟೋ ಹಿಡಿದುಕೊಂಡು ತಮಟೆ ಸದ್ದಿಗೆ ಕುಣಿದು ಕುಪ್ಪಳಿಸಿದರು. ನೂರಾರು ವಿದ್ಯಾರ್ಥಿಗಳು ಸಹ ಕಾಲೇಜಿಗೆ ಬಂಕ್ ಮಾಡಿ ಸಿನಿಮಾ ನೋಡಿದರು. ನಾರಾಯಣಿ ಚಿತ್ರಮಂದಿರದಲ್ಲಿ ಅಭಿಮಾನಿಗಳು ಗಿಡ ನೆಟ್ಟು ಸಿಹಿ ಹಂಚಿ ಸಂಭ್ರಮಿಸಿದರು. ಅಪ್ಪು ಅವರ ಕನಸಿನಂತೆ 'ಎಲ್ಲರೂ ಗಿಡ ನೆಡಿ, ಪರಿಸರ ಉಳಿಸಿ' ಎಂಬ ಸಂದೇಶ ಸಾರಲಾಯಿತು.

ಕೋಲಾರ ಜಿಲ್ಲೆಯ ಮೂರು ಚಿತ್ರಮಂದಿರಗಳಲ್ಲಿ ಗಂಧದ ಗುಡಿ ಸಿನಿಮಾ ಬಿಡುಗಡೆಯಾಗಿದೆ. ನಗರದ ಶಾರದಾ ಚಿತ್ರಮಂದಿರ, ಮಾಲೂರು ಬಾಲಾಜಿ ಚಿತ್ರ ಮಂದಿರ ಹಾಗೂ ಬಂಗಾರಪೇಟೆಯ ವಿಜಯ ಚಿತ್ರಮಂದಿರದಲ್ಲಿ ಸಿನಿಮಾ ಬಿಡುಗಡೆಯಾಗಿದೆ. ಸಿನಿಮಾ ಬಿಡುಗಡೆ ಹಿನ್ನೆಲೆ ಅಭಿಮಾನಿಗಳಲ್ಲಿ ಮನೆ ಸಂಭ್ರಮ ಮಾಡಿದ್ದು, ಚಿತ್ರಮಂದಿರಗಳಿಗೆ ಅದ್ದೂರಿ ಅಲಂಕಾರ ಮಾಡಲಾಗಿತ್ತು.

Gandhada Gudi Grand Release appu Fans Celebrations
ಗಂಧದ ಗುಡಿ ರಿಲೀಸ್: ಅಪ್ಪು ಅಭಿಮಾನಿಗಳ ಸಂಭ್ರಮಾಚರಣೆ

ಕೊಪ್ಪಳದ ಶಿವ ಚಿತ್ರಮಂದಿರದಲ್ಲಿ ಗಂಧದ ಗುಡಿ ಚಿತ್ರ ಮೊದಲ ಪ್ರದರ್ಶನ ಕಂಡಿದೆ. ಬೆಳಗ್ಗೆ 11 ಗಂಟೆಗೆ ಆರಂಭವಾದ ಮೊದಲ ಪ್ರದರ್ಶನಕ್ಕೆ ಆಗಮಿಸಿದ್ದ ನೂರಾರು ಅಭಿಮಾನಿಗಳು ಅಪ್ಪು ಪೋಸ್ಟರ್​​ಗೆ ಮಾಲಾರ್ಪಣೆ, ಹಾಲಿನ ಅಭಿಷೇಕ ಮಾಡಿ ಜೊತೆಗೆ ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಇದನ್ನೂ ಓದಿ: ಪುನೀತ್​ ಕಟೌಟ್​ಗೆ ಹಾಲಿನ‌ ಅಭಿಷೇಕ - ಬೆಳಗಾವಿಯಲ್ಲಿ ಅಪ್ಪು ಅಭಿಮಾನಿಗಳಿಂದ ಸಸಿ ವಿತರಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.