ಹಾವೇರಿ: ಕೊರೊನಾ ಸೋಂಕು ತಡೆಗೆ ಹಗಲು-ರಾತ್ರಿ ಶ್ರಮಿಸುತ್ತಿರುವ ಪೊಲೀಸ್ ಸಿಬ್ಬಂದಿಗೆ ಗ್ರಾಮ ಪಂಚಾಯಿತಿಯಿಂದ ಊಟದ ವ್ಯವಸ್ಥೆ ಮಾಡಲಾಗಿತ್ತು.
ಜಿಲ್ಲೆಯ ಹಿರೇಕೆರೂರು ತಾಲೂಕಿನ ಹಂಸಭಾವಿ ಪೊಲೀಸ್ ಠಾಣೆ ಸಿಬ್ಬಂದಿಗೆ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಮುಖಂಡರು ಸೇರಿ ರೊಟ್ಟಿ, ಚಪಾತಿ, ಬದನೆಕಾಯಿ, ಶೇಂಗಾ ಪುಡಿ ಸೇರಿದಂತೆ ತರಹೇವಾರಿ ಅಡುಗೆ ತಯಾರಿಸಿ ನೀಡಿದರು.
ಲಾಕ್ಡೌನ್ ಹಿನ್ನೆಲೆ ಕರ್ತವ್ಯದಲ್ಲಿ ನಿರತರಾದ ಎಲ್ಲಾ ಪೊಲೀಸರಿಗೂ ವಿತರಿಸಲಾಯಿತು. ಪೊಲೀಸ್ ಸಿಬ್ಬಂದಿ ಕೂಡ ಇದಕ್ಕೆ ಧನ್ಯವಾದ ತಿಳಿಸಿದ್ದಾರೆ.