ETV Bharat / state

ಹಾವೇರಿ ಪಟಾಕಿ ದುರಂತ: ಮೃತರ ಕುಟುಂಬಗಳಿಗೆ ತಲಾ ₹1 ಲಕ್ಷ ಪರಿಹಾರ ವಿತರಿಸಿದ ಬೊಮ್ಮಾಯಿ - ಆಲದಕಟ್ಟಿ ಗ್ರಾಮ

ಹಾವೇರಿ ಪಟಾಕಿ ದುರಂತದಲ್ಲಿ ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ಸಿಗಬೇಕು ಮತ್ತು ಸಾವನ್ನಪ್ಪಿದವರ ಕುಟುಂಬಗಳಿಗೆ ಸರಿಯಾದ ಪರಿಹಾರ ಸಿಗಬೇಕು ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.

former-cm-basavaraja-bommai-distributed-compensation-to-familys-who-died-in-haveri-fire-accident
ಹಾವೇರಿ ಪಟಾಕಿ ದುರಂತ: ಮೃತರ ಕುಟುಂಬಗಳಿಗೆ ತಲಾ ₹1 ಲಕ್ಷ ಪರಿಹಾರ ವಿತರಿಸಿದ ಬೊಮ್ಮಾಯಿ
author img

By ETV Bharat Karnataka Team

Published : Sep 9, 2023, 10:53 PM IST

Updated : Sep 9, 2023, 10:59 PM IST

ಮಾಜಿ ಸಿಎಂ ಬಸವರಾಜ ಬೊಮ್ಮಾಯಿ

ಹಾವೇರಿ: ಪಟಾಕಿಯಂತಹ ಸ್ಫೋಟಕ ವಸ್ತುಗಳ ಅವಘಡಗಳಲ್ಲಿ ಗಾಯಾಳುಗಳಿಗಿಂತ ಸಾವನ್ನಪ್ಪುವವರ ಸಂಖ್ಯೆ ಅಧಿಕವಾಗಿರುತ್ತದೆ ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದರು. ಹಾವೇರಿ ತಾಲೂಕು ಆಲದಕಟ್ಟಿ ಗ್ರಾಮದಲ್ಲಿ ಪಟಾಕಿ ದುರಂತ ನಡೆದ ಗೋದಾಮಿಗೆ ಭೇಟಿ ನೀಡಿ ಘಟನೆಯಲ್ಲಿ ಸಾವನ್ನಪ್ಪಿದ ಕಾಟೇನಹಳ್ಳಿ ಗ್ರಾಮದ ಮೂವರು ಯುವಕರ ಕುಟುಂಬದ ಸದಸ್ಯರಿಗೆ ಬಿಜೆಪಿಯಿಂದ ತಲಾ ಒಂದು ಲಕ್ಷ ರೂಪಾಯಿ ಪರಿಹಾರ ನೀಡಿದರು.

ಬಳಿಕ ಮಾತನಾಡಿದ ಅವರು, ಈ ರೀತಿ ಘಟನೆಗಳು ಆಗದಂತೆ ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಳ್ಳಬೇಕು. ಘಟನೆಯಲ್ಲಿ ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ಸಿಗಬೇಕು ಮತ್ತು ಸಾವನ್ನಪ್ಪಿದವರ ಕುಟುಂಬಗಳಿಗೆ ಸರಿಯಾದ ಪರಿಹಾರ ಸಿಗಬೇಕು. ರಾಣೆಬೆನ್ನೂರು ಸೇರಿದಂತೆ ಆಲದಕಟ್ಟಿಯಲ್ಲಾದ ಪಟಾಕಿ ಅವಘಡಗಳಿಗೆ ಜಿಲ್ಲಾಡಳಿತದ ದುರ್ಲಕ್ಷ್ಯ ಮತ್ತು ಅಧಿಕಾರಿಗಳ ನಿರ್ಲಕ್ಷ್ಯ ಕಾರಣ. ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಈ ಗೋದಾಮಿನಲ್ಲಿ ಭಾರೀ ಪ್ರಮಾಣದಲ್ಲಿ ಪಟಾಕಿಯನ್ನು ನಿರ್ಭಿತಿಯಿಂದ ಲೈಸೆನ್ಸ್​ ಇಲ್ಲದೆ ದಾಸ್ತಾನು ಮಾಡಿದ್ದಾರೆ ಅಂದರೆ ಹೇಗೆ. ರಾಣೆಬೆನ್ನೂರು ಪ್ರಕರಣದಲ್ಲಿ ಸಾವನ್ನಪ್ಪಿದವರಿಗೆ ಸೂಕ್ತ ಪರಿಹಾರ ನೀಡಬೇಕು ಮತ್ತು ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.

ಇನ್ನು ಹಾವೇರಿ ಜಿಲ್ಲೆಯಲ್ಲಿ ರೈತ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತೀರುವುದಕ್ಕೆ ಮಾಜಿ ಸಿಎಂ ಬೊಮ್ಮಾಯಿ ಕಳವಳ ವ್ಯಕ್ತಪಡಿಸಿ, ಈ ಕುರಿತಂತೆ ವಿಧಾನಸಭೆ ಅಧಿವೇಶನದಲ್ಲಿ ನಾನು ಹೇಳಿದಾಗ ಕೃಷಿ ಸಚಿವರು ಒಪ್ಪಲಿಲ್ಲ. ಈ ಕುರಿತಂತೆ ದಾಖಲಾತಿಗಳಿವೆ ಎಂದರೂ ಸಹ ಒಪ್ಪಲಿಲ್ಲ. ಈ ಕುರಿತಂತೆ ಸಚಿವ ಶಿವಾನಂದ ಪಾಟೀಲ್ ಬೇಜಬ್ದಾರಿ ಹೇಳಿಕೆ ನೀಡಿದ್ದಾರೆ. ಈ ಸರ್ಕಾರ ರೈತ ವಿರೋಧಿ ಮತ್ತು ರೈತರನ್ನ ನಿರ್ಲಕ್ಷ್ಯ ಮಾಡಿದೆ ಎಂದು ಕಿಡಿಕಾರಿದರು.

ರೈತ ಆತ್ಮಹತ್ಯೆ ಪ್ರಕರಣಗಳನ್ನು ಈಗ ಸರ್ಕಾರ ಒಪ್ಪುತ್ತಿದೆ. ಹಿಂದೆ ಎಫ್​ಎಸ್​ಎಲ್ ರಿಪೋರ್ಟ ಬರಲು ತಡವಾಗುತ್ತಿದ್ದು, ಈಗ 15 ದಿನದಲ್ಲಿ ರಿಪೋರ್ಟ ಬರುತ್ತಿದೆ. ಅಧಿಕಾರಿಗಳು ರೈತ ಆತ್ಮಹತ್ಯೆಯಾದಾಗ ಕೇವಲ ಬ್ಯಾಂಕಿನಲ್ಲಿ ಸಾಲ ಮಾಡಿರುವುದನ್ನು ಮಾತ್ರ ಪರಿಗಣಿಸುತ್ತಾರೆ. ಕೆಲ ರೈತರಿಗೆ ಬ್ಯಾಂಕ್​ ಸಹ ಸಾಲ ನೀಡಿರುವುದಿಲ್ಲ ಖಾಸಗಿಯಾಗಿ ಮೀಟರ್ ಬಡ್ಡಿಯಲ್ಲಿ ರೈತರು ಸಾಲ ಮಾಡಿರುತ್ತಾರೆ, ಅದನ್ನು ಸಹ ಅಧಿಕಾರಿಗಳು ಪರಿಗಣಿಸಬೇಕು ಎಂದು ಒತ್ತಾಯಿಸಿದರು. ರಾಜ್ಯದಲ್ಲಿ ರೈತ ಆತ್ಮಹತ್ಯೆಗಳಲ್ಲಿ ಸಕಾರಣವಿಲ್ಲದೇ ಸರ್ಕಾರ ಪರಿಹಾರ ನೀಡಲು ಮುಂದಾಗದಿದ್ದರೇ ಅದರ ಬಗ್ಗೆ ಮಾಹಿತಿ ಕಲೆ ಹಾಕಿ ಬಿಜೆಪಿಯ ತಾಲೂಕು ನಾಯಕರೇ ಆರ್ಥಿಕ ಸಹಾಯ ಮಾಡಲಿದ್ದಾರೆ. ಈ ಕುರಿತಂತೆ ಶೀಘ್ರದಲ್ಲಿಯ ಬಿಜೆಪಿ ರಾಜ್ಯಮಟ್ಟದ ನಿರ್ಣಯವನ್ನ ಆದಷ್ಟು ಬೇಗ ತಗೆದುಕೊಳ್ಳುವದಾಗಿ ತಿಳಿಸಿದರು.

ಪಟಾಕಿ ದುರಂತದಲ್ಲಿ ನಾಲ್ವರು ಸಾವು: ಕಳೆದ ತಿಂಗಳು ಆಲದಕಟ್ಟಿ ಗ್ರಾಮದಲ್ಲಿನ ಭೂಮಿಕಾ ಪಟಾಕಿ ಅಂಗಡಿ ಮತ್ತು ಗೋದಾಮಿನಲ್ಲಿ ಸಂಭವಿಸಿದ್ದ ಅಗ್ನಿ ಅವಘಡದಲ್ಲಿ ನಾಲ್ವರು ಮೃತಪಟ್ಟಿದ್ದರು. ಸಂಪೂರ್ಣವಾಗಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ನಾಲ್ವರ ಮೃತದೇಹಗಳು ಪತ್ತೆಯಾಗಿತ್ತು. ಮೃತರನ್ನ 25 ವರ್ಷದ ದ್ಯಾಮಪ್ಪ ಓಲೇಕಾರ, 28 ವರ್ಷದ ರಮೇಶ್ ಬಾರ್ಕಿ ಮತ್ತು 22 ವರ್ಷದ ಶಿವಲಿಂಗ ಅಕ್ಕಿ ಎಂದು ಗುರುತಿಸಲಾಗಿತ್ತು. ಮೃತರು ಬ್ಯಾಡಗಿ ತಾಲೂಕಿನ ಕಾಟೇನಹಳ್ಳಿ ಗ್ರಾಮದ ನಿವಾಸಿಗಳೆಂದು ತಿಳಿದು ಬಂದಿತ್ತು.

ಇದನ್ನೂ ಓದಿ: ಪಟಾಕಿ ಗೋದಾಮಿನಲ್ಲಿ ಬೆಂಕಿ ಅವಘಡ ಸಂಬಂಧ ಎಲ್ಲ ಆಯಾಮದಲ್ಲೂ ತನಿಖೆ: ಸಚಿವ ಶಿವಾನಂದ ಪಾಟೀಲ್

Last Updated : Sep 9, 2023, 10:59 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.