ರಾಣೆಬೆನ್ನೂರು: ಮಧ್ಯರಾತ್ರಿ ಸಮಯದಲ್ಲಿ ಎರಡು ಮನೆಗಳಿಗೆ ಬೆಂಕಿ ಬಿದ್ದು ಅಪಾರ ಪ್ರಮಾಣದಲ್ಲಿ ಹಾನಿಯಾದ ಘಟನೆ ರಾಣೆಬೆನ್ನೂರು ತಾಲೂಕಿನ ಆರೇಮಲ್ಲಾಪುರ ಗ್ರಾಮದ ಶಿವಾಜಿ ನಗರದಲ್ಲಿ ನಡೆದಿದೆ.
ಗ್ರಾಮದ ಫಕ್ಕಿರಪ್ಪ ಹನುಮಂತಪ್ಪ ಹಲವಾಗಲ ಮತ್ತು ಕೋಟೆಪ್ಪ ಎಂಬುವರಿಗೆ ಸೇರಿದ ಮನೆಗಳು ಸುಟ್ಟು ಕರಕಲಾಗಿವೆ.
ಮಧ್ಯರಾತ್ರಿ ಅಚಾನಕ್ಕಾಗಿ ಫಕ್ಕಿರಪ್ಪ ಮನೆಗೆ ಬೆಂಕಿ ಹತ್ತಿದೆ. ತಕ್ಷಣ ಕುಟುಂಬಸ್ಥರು ಹೊರಗಡೆ ಬಂದಿದ್ದಾರೆ. ಆದರೆ ಬೆಂಕಿಯ ಕೆನ್ನಾಲಿಗೆ ಜೋರಾದ ಕಾರಣ ಪಕ್ಕದ ಕೋಟೆಪ್ಪ ಮನೆಗೆ ಬೆಂಕಿ ಹಬ್ಬಿ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ.
ಮನೆಯಲ್ಲಿದ್ದ ಗೃಹ ಬಳಕೆ ಸಾಮಾನುಗಳು, ದಾಖಲೆಗಳು, ಹಣ ಸೇರಿದಂತೆ ಚಿನ್ನಾಭರಣಗಳು ಸುಟ್ಟು ಭಸ್ಮವಾಗಿವೆ.