ಹಾವೇರಿ: 20 ಕ್ಕೂ ಅಧಿಕ ಮೇವಿನ ಬಣವೆಗಳು ಮತ್ತು ಮೆಕ್ಕೆಜೋಳದ ಐದು ತೆನೆರಾಶಿಗಳು ಬೆಂಕಿಗಾಹುತಿಯಾದ ಘಟನೆ ತಾಲೂಕಿನ ಬಮ್ಮನಕಟ್ಟಿ ಗ್ರಾಮದಲ್ಲಿ ಸಂಭವಿಸಿದೆ.
15 ಕ್ಕೂ ಅಧಿಕ ರೈತರು ಮೇವಿನ ಬಣವಿ ಮತ್ತು ಗೋವಿನಜೋಳದ ತೆನೆರಾಶಿಗಳನ್ನು ಒಂದೇ ಕಡೆ ಹಾಕಿದ್ದರು. ಸಮೀಪದಲ್ಲಿದ್ದ ವಿದ್ಯುತ್ ಕಂಬದ ಶಾರ್ಟ್ ಸರ್ಕ್ಯೂಟ್‌ನಿಂದ ಹೊತ್ತಿಕೊಂಡ ಬೆಂಕಿ ಮೇವಿನ ಬಣವೆ ಮತ್ತು ತೆನೆರಾಶಿಗಳನ್ನ ಸುಟ್ಟು ಕರಕಲು ಮಾಡಿದೆ.
ಇದನ್ನೂ ಓದಿ: ಕಲಬುರಗಿ.. ಹೊಟ್ಟೆತುಂಬ ಊಟ ಕೊಡಲಿಲ್ಲವೆಂದು ವೃದ್ಧನ ಹೊಡೆದು ಕೊಂದ ಮಾನಸಿಕ ಅಸ್ವಸ್ಥ!
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ, ಬೆಂಕಿ ನಂದಿಸುವ ಕಾರ್ಯ ನಡೆಸಿದೆ. ಗುತ್ತಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.