ETV Bharat / state

ತುಂಬಿ ಹರಿಯುತ್ತಿರವ ನದಿ.. ಎತ್ತಿನಗಾಡಿಯಲ್ಲಿ ಕೃಷಿ ಕೆಲಸಕ್ಕೆ ತೆರಳಿದ ಎಂಟೆದೆ ಬಂಟರು! - ಹಾವೇರಿಯಲ್ಲಿ ನದಿ ದಾಟಿ ಕೃಷಿ ಕೆಲಸಕ್ಕೆ ಹೋಗಿ ಬಂದ ರೈತರು

ರೈತ ಕುಟುಂಬವೊಂದು ತುಂಬಿ ಹರಿಯುತ್ತಿರುವ ನದಿಯನ್ನು ಎತ್ತಿನಗಾಡಿಯಲ್ಲಿ ದಾಟಿ ಕೃಷಿ ಕೆಲಸ ಮುಗಿಸಿಕೊಂಡು ವಾಪಾಸ್ಸಾಗಿರುವ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ.

farmer family crossed the river in a bullock cart,  farmer family crossed the river in a bullock cart at Haveri, Haveri news, ಎತ್ತಿನಗಾಡಿ ಮೂಲಕ ತುಂಬಿ ಹರಿಯುತ್ತಿರುವ ನದಿ ದಾಟಿದ ರೈತ ಕುಟುಂಬ, ಹಾವೇರಿಯಲ್ಲಿ ನದಿ ದಾಟಿ ಕೃಷಿ ಕೆಲಸಕ್ಕೆ ಹೋಗಿ ಬಂದ ರೈತರು, ಹಾವೇರಿ ಸುದ್ದಿ,
ತುಂಬಿ ಹರಿಯುತ್ತಿರವ ನದಿ ದಾಟಿದ ರೈತ ಕುಟುಂಬ
author img

By

Published : Jul 16, 2022, 10:57 AM IST

ಹಾವೇರಿ: ತುಂಬಿ ಹರಿಯುವ ನದಿಯಲ್ಲಿ ಎತ್ತಿನಗಾಡಿ ದಾಟಿಸಿಕೊಂಡು ಜಮೀನಿಗೆ ರೈತ ಕುಟುಂಬವೊಂದು ಕೃಷಿ ಕೆಲಸಕ್ಕೆ ಹೋಗಿ ಬಂದ ಘಟನೆ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ರಟ್ಟೀಹಳ್ಳಿ ತಾಲೂಕಿನ ಮಾಸೂರು ಗ್ರಾಮದ ಬಳಿ ಇರುವ ಕುಮುದ್ವತಿ ನದಿಯಲ್ಲಿ ಈ ಕುಟುಂಬ ಹರಸಾಹಸ ಮಾಡಿದೆ. ಎತ್ತಿನಬಂಡಿಯಲ್ಲಿ ಏಳು ಜನ, ಬಂಡಿಯ ಮುಂದೆ ಒಬ್ಬ ಹೋಗಿ ಈ ಕುಟುಂಬ ಕೃಷಿ ಕೆಲಸ ಮಾಡಿದೆ ಎಂದು ತಿಳಿದು ಬಂದಿದೆ.

ಮಾಸೂರು - ಮೇದೂರು ಗ್ರಾಮದ ನಡುವೆ ತುಂಬಿ ಹರಿಯುತ್ತಿರುವ ಕುಮುದ್ವತಿಯಲ್ಲಿ ಎತ್ತಿನಬಂಡಿ ಮುಳುಗೋ ಹಂತದಲ್ಲಿದ್ರೂ ಈ ರೈತ ಕುಟುಂಬ ಪ್ರಯಾಣ ಬೆಳಸಿದೆ. ಜೀವದ ಹಂಗು ತೊರೆದು ಜಮೀನು ಕೆಲಸಕ್ಕೆ ಹೋಗಿ ಬಂದ ರೈತ ಕುಟುಂಬ ಸಾಹಸಕ್ಕೆ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.

ತುಂಬಿ ಹರಿಯುತ್ತಿರವ ನದಿ ದಾಟಿದ ರೈತ ಕುಟುಂಬ

ಓದಿ: ಎಷ್ಟೇ ಬಾರಿ ಹೇಳಿದ್ರೂ ಕ್ರಮ ಕೈಗೊಳ್ಳದ ಅಧಿಕಾರಿಗಳು.. 200 ಎಕರೆ ಭತ್ತದ ಬೆಳೆ ನಾಶ, ರೈತರ ಆಕ್ರೋಶ

ಸ್ವಲ್ಪವೇ ಯಾಮಾರಿದರೂ ಈ ಎಂಟು ಜನ ನೀರು ಪಾಲಾಗ್ತಿದ್ದರು. ನದಿಯಲ್ಲಿ ದಾಟಿಕೊಂಡು ಹೋಗದಂತೆ ಸ್ಥಳೀಯರು ಹೇಳಿದರೂ ಸಹ ಅವರ ಮಾತಿಗೆ ಕಿವಿಗೊಡದೇ ನದಿಯಲ್ಲಿ ಪ್ರಯಾಣ ಬೆಳಸಿರುವುದು ಚರ್ಚೆಗೆ ಗ್ರಾಸವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.