ರಾಣೆಬೆನ್ನೂರು: ತಾಲೂಕಿನ ಮೇಡ್ಲೇರಿ ಗ್ರಾಮದಲ್ಲಿ ಕಳೆದ ಹದಿನೈದು ದಿನಗಳ ಹಿಂದೆ ಸುರಿದ ಜೋರು ಮಳೆಗೆ ಭತ್ತದ ಬೆಳೆ ಹಾನಿಯಾದ ಕಾರಣ, ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ದಿಳ್ಳೆಪ್ಪ ಭೀಮಪ್ಪ ಬೂದನೂರು (50) ಆತ್ಮಹತ್ಯೆ ಮಾಡಿಕೊಂಡ ರೈತ. ಇತ್ತೀಚೆಗೆ ಸುರಿದ ಅಧಿಕ ಮಳೆಯಿಂದ ನದಿ ಪ್ರವಾಹ ಹೆಚ್ಚಾಗಿ ಭತ್ತದ ಗದ್ದೆಗೆ ನೀರು ನುಗ್ಗಿತ್ತು. ಇದರಿಂದ ಬೆಳೆ ಸಂಪೂರ್ಣ ನಾಶವಾಗಿತ್ತು. ಹೀಗಾಗಿ ನೊಂದ ರೈತ ಪರಿಹಾರಕ್ಕೆ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಅಲ್ಲದೆ ಬ್ಯಾಂಕ್ ಸೇರಿದಂತೆ ವಿವಿಧ ಕಡೆ ಐದು ಲಕ್ಷ ರೂ ಸಾಲ ಮಾಡಿದ್ದರಂತೆ.
ರಾಣೆಬೆನ್ನೂರು ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.