ಹಾವೇರಿ: ಕೊರೊನಾ ಸೋಂಕು ಹರಡುವಿಕೆ ತಡೆಯಲು ಹಾವೇರಿ ಜಿಲ್ಲಾಡಳಿತಕ್ಕೆ ಅಬಕಾರಿ ಇಲಾಖೆ 250 ಲೀಟರ್ ಸ್ಯಾನಿಟೈಸರ್ ನೀಡಿದೆ.
ಜಿಲ್ಲಾಧಿಕಾರಿ ಕೃಷ್ಣ ವಾಜಪೇಯಿಗೆ ಅಬಕಾರಿ ಡಿಸಿ ಡಾ.ಮಹಾದೇವಿ ಬಾಯಿ ಸ್ಯಾನಿಟೈಸರ್ ಕ್ಯಾನ್ ಹಸ್ತಾಂತರಿಸಿದರು. ಸ್ಯಾನಿಟೈಸರ್ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ, ಕೊರೊನಾ ತಡೆಗಟ್ಟುವಲ್ಲಿ ಸ್ಯಾನಿಟೈಸರ್ ಪಾತ್ರ ಪ್ರಮುಖವಾಗಿದೆ. ಇದರಿಂದ ಕೊರೊನಾ ಚೈನ್ ಮುಂದುವರಿಕೆಯನ್ನ ತಡೆಗಟ್ಟಬಹುದು ಎಂದು ತಿಳಿಸಿದರು.