ETV Bharat / state

ವಿದ್ಯೆಗೆ ಬಡತನ ಅಡ್ಡಿ: ಅನಾಥ ಬಾಲಕನ ಜೀವನ 'ಚೇತನ'ವಾಗಲು ಬೇಕಿದೆ ನೆರವು - Haveri

ಹಾನಗಲ್​ನ ಅನಾಥ ಬಾಲಕನಿಗೆ ಶಿಕ್ಷಣ ಪಡೆಯಲು ಆರ್ಥಿಕ ಸಮಸ್ಯೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಸಹೃದಯಿಗಳು ಸಹಾಯಹಸ್ತ ಚಾಚುವಂತೆ ಮನವಿ ಮಾಡಿಕೊಂಡಿದ್ದಾನೆ ಬಡ ವಿದ್ಯಾರ್ಥಿ.

ಸಹಾಯಹಸ್ತ ಚಾಚುತ್ತಿರುವ ಬಾಲಕ ಚೇತನ್​
ಸಹಾಯಹಸ್ತ ಚಾಚುತ್ತಿರುವ ಬಾಲಕ ಚೇತನ್​
author img

By

Published : Aug 19, 2020, 4:52 PM IST

ಹಾನಗಲ್: ವಿದ್ಯಾಭ್ಯಾಸ ಮುಂದುವರಿಸಬೇಕು ಎಂಬ ಬಯಕೆ ಇದೆ. ಮುಂದೆ ಶಿಕ್ಷನಾಗಿ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕೆಂಬ ಮಹತ್ವಾಕಾಂಕ್ಷೆ ಇಟ್ಟುಕೊಂಡಿರುವ ವಿದ್ಯಾರ್ಥಿಗೆ ಬಡತನ ಅಡ್ಡಿಯಾಗಿದೆ.

ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ವರ್ದಿ ಗ್ರಾಮದ ಚೇತನ್​ ಕಮ್ಮಾರ ಎಂಬ ಬಾಲಕ ಎಸ್ಎಸ್ಎಲ್​ಸಿ ಪರೀಕ್ಷೆಯಲ್ಲಿ 509 ಅಂಕಗಳ ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣನಾಗಿದ್ದಾನೆ. ಮುಂದೆ ವಿಜ್ಞಾನ ವಿಭಾಗದಲ್ಲಿ ಶಿಕ್ಷಣ ಪಡೆಯಬೇಕೆಂಬ ಹಂಬಲದಲ್ಲಿದ್ದಾನೆ.

ಸಹಾಯಕ್ಕೆ ಮೊರೆಯಿಟ್ಟ ವಿದ್ಯಾರ್ಥಿ ಚೇತನ್​

ಈವರೆಗೆ ಅಪ್ಪ-ಅಮ್ಮನಿಲ್ಲದೆ ಅನಾಥವಾಗಿರುವ ಈ ಬಾಲಕನಿಗೆ ಆತನ ಚಿಕ್ಕಪ್ಪ ಕೂಲಿ ಕೆಲಸ ಮಾಡಿಕೊಂಡು ಶಿಕ್ಷಣ ಕೊಡಿಸಿದರು. ಆದರೆ ಉನ್ನತ ಶಿಕ್ಷಣ ನೀಡಲು ಅವರ ಬಳಿ ಹಣವಿಲ್ಲ. ಈ ಹಿನ್ನೆಲೆಯಲ್ಲಿ ಆತನ ವಿದ್ಯಾಭ್ಯಾಸಕ್ಕೆ ಆರ್ಥಿಕ ಸಂಕಷ್ಟ ಕಾಡುತ್ತಿದೆ.

ಅನಾಥನಾಗಿ ಹುಟ್ಟಿದ ನನಗೆ ಏನಾದರು ಸಾಧಿಸುವ ಛಲವಿದೆ. ನನ್ನ ಈ ವಿದ್ಯಾಭ್ಯಾಸದ ಕನಸು ಈಡೇರಲು ಸಹಾಯ ಮಾಡಿ ಎಂದು ಈ ಬಾಲಕ ಅಂಗಲಾಚುತ್ತಿದ್ದಾನೆ. ಈ ವಿದ್ಯಾರ್ಥಿಯ ಶಿಕ್ಷಣಕ್ಕೆ ಸಹಾಯ ಮಾಡಲು ಇಚ್ಛಿಸುವ ಸಹೃದಯಿಗಳು ಈ ಕೆಳಗಿನ ಬ್ಯಾಂಕ್​ ಖಾತೆಗೆ ಹಣ ಜಮಾಯಿಸಬಹುದು.

ಸಂಪರ್ಕಸಂಖ್ಯೆ: 7619596120, 9986119486

AC/No: 89080192638

IFSC No:kvgb0007106

ETV Bharat Logo

Copyright © 2024 Ushodaya Enterprises Pvt. Ltd., All Rights Reserved.