ರಾಣೆಬೆನ್ನೂರು (ಹಾವೇರಿ): ನಗರದ ಪ್ರತಿಷ್ಠಿತ ವೈದ್ಯ ಡಾ. ಬಿ.ಎಸ್. ಕೇಲಗಾರ ಪುತ್ರಿ ಡಾ. ಪೂಜಾ ಅವರು ಮೈಸೂರಿನ ಜೆಎಸ್ಎಸ್ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಅರವಳಿಕೆ ಶಾಸ್ತ್ರ ವಿಭಾಗದಲ್ಲಿ ಎರಡು ಚಿನ್ನದ ಪದಕ ಗಳಿಸಿ ಸಾಧನೆ ಮಾಡಿದ್ದಾರೆ.
ಮೈಸೂರಿನಲ್ಲಿ ನಿನ್ನೆ ನಡೆದ 11ನೇ ವರ್ಷದ ಜೆಎಸ್ಎಸ್ ಘಟಿಕೋತ್ಸವ ಕಾರ್ಯಕ್ರಮದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ಡಾ. ಪೂಜಾ ಕೇಲಗಾರ ಎಂಬಿಬಿಎಸ್ ವ್ಯಾಸಂಗ ಮುಗಿಸಿದ ನಂತರ ಜೆಎಸ್ಎಸ್ ವಿದ್ಯಾಲಯದಲ್ಲಿ ಎರಡು ವರ್ಷ ಅರವಳಿಕೆ ತಜ್ಞ ವಿಷಯವನ್ನು ಅಧ್ಯಯನ ಮಾಡಿದ್ದರು.
ಕಠಿಣ ಪರಿಶ್ರಮ ಹಾಗೂ ಓದುವಿಕೆ ಮೂಲಕ ವೈದ್ಯಕೀಯ ಮಹಾವಿದ್ಯಾಲಯಕ್ಕೆ ಪ್ರಥಮ ಸ್ಥಾನ ಮತ್ತು ಅರವಳಿಕೆ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡು ಬಂಗಾರದ ಪದಕಗಳನ್ನು ಪಡೆದಿದ್ದಾರೆ.
ಈ ಸಾಧನೆ ಕುರಿತು ಮಾತನಾಡಿದ ಡಾ. ಪೂಜಾ ಅವರು ತಂದೆ-ತಾಯಿಯ ಆಶೀರ್ವಾದ ಮತ್ತು ನಮ್ಮ ವಿಭಾಗದ ಎಲ್ಲಾ ನುರಿತ ವೈದ್ಯರ ಪ್ರೋತ್ಸಾಹದಿಂದ ಈ ಸಾಧನೆ ಮಾಡಲು ಸಾಧ್ಯವಾಯಿತು. ಅವರಿಗೆ ನನ್ನ ಅನಂತ ನಮನಗಳ ಸಲ್ಲಿಸುತ್ತೆನೆ ಎಂದರು.