ಹಾವೇರಿ: ಹಿರೇಕೆರೂರು ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ರಟ್ಟಿಹಳ್ಳಿ ಕಬ್ಬಿಣಕಂತಿ ಮಠದ ಶಿವಲಿಂಗ ಸ್ವಾಮಿಗಳ ವಿರುದ್ಧ ಭಕ್ತರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಕ್ತರ ಸಭೆ ನಂತರ ನಾಮಪತ್ರ ಸಲ್ಲಿಸೋದಿಲ್ಲ ಅಂದಿದ್ದ ಸ್ವಾಮೀಜಿ, ನವಂಬರ್ 17ರ ರಾತ್ರೋರಾತ್ರಿ ನಿರ್ಧಾರ ಬದಲಿಸಿ, ಸೋಮವಾರ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರೋ ಸ್ವಾಮೀಜಿ ನಡೆ ಭಕ್ತರಿಗೆ ಅಸಮಾಧಾನ ತಂದಿದೆ.

ನಮಗೆ ಸ್ವಾಮೀಜಿ ಮೇಲೆ ಭಕ್ತಿ ಇದೆ, ಭಕ್ತಿಗೋಸ್ಕರ ಯಡಿಯೂರಪ್ಪನವರನ್ನು ಬಲಿ ಕೊಡೋಕೆ ಆಗತ್ತಾ?, ಅಧಿಕಾರದ ಆಸೆಗಾಗಿ ಭಕ್ತರನ್ನು ಕಳೆದುಕೊಂಡ ಸ್ವಾಮಿ.. ಹೀಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ಭಕ್ತರು ಆಕ್ರೋಶ ಹೊರಹಾಕಿದ್ದಾರೆ.