ರಾಣೆಬೆನ್ನೂರು: ತಾಲೂಕಿನಲ್ಲಿ ಕೊರೊನಾ ಭಯದ ನಡುವೆ ಎಸ್ಎಸ್ಎಲ್ಸಿ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ಸಕಲ ಸಿದ್ಧತೆ ನಡೆಸಿದೆ.
ತಾಲೂಕಿನಲ್ಲಿ ಶಿಕ್ಷಣ ಇಲಾಖೆ ಈಗಾಗಲೇ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಜೂನ್ 25 ರಂದು ಪರೀಕ್ಷೆ ನಡೆಸಲು ಎಲ್ಲಾ ರೀತಿಯ ಕೊರೊನಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದೆ.
ತಾಲೂಕಿನಲ್ಲಿ ಒಟ್ಟು 4466 ವಿದ್ಯಾರ್ಥಿಗಳಲ್ಲಿ 2208 ಗಂಡು ಮಕ್ಕಳು ಮತ್ತು 2258 ಹೆಣ್ಣು ಮಕ್ಕಳು ಈ ಬಾರಿ ಎಸ್ಎಸ್ಎಲ್ಸಿ ಪರೀಕ್ಷೆ ಬರೆಯುತ್ತಿದ್ದಾರೆ. ಒಟ್ಟು 15 ಪರೀಕ್ಷಾ ಕೇಂದ್ರಗಳಿಗಿದ್ದು, ನಗರದಲ್ಲಿ 5 ಹಾಗೂ ಗ್ರಾಮೀಣ ಪ್ರದೇಶದಲ್ಲಿ 10 ಪರೀಕ್ಷಾ ಕೇಂದ್ರಗಳಿವೆ.
ಈ ಪರೀಕ್ಷಾ ಕೇಂದ್ರಗಳಿಗೆ ನಗರಸಭೆ ಮತ್ತು ಗ್ರಾ.ಪಂ ಆಡಳಿತ ವತಿಯಿಂದ ಸ್ಯಾನಿಟೈಜ್ ಮಾಡಿಸಲಾಗಿದೆ. ವಿದ್ಯಾರ್ಥಿಗಳು ಸಾಮಾಜಿಕ ಅಂತರ ಕುಳಿತು ಪರೀಕ್ಷೆ ಬರೆಯಲು ಒಂದು ಕೊಠಡಿಯಲ್ಲಿ 20 ವಿದ್ಯಾರ್ಥಿಗಳಿಗೆ ಅನುಕೂಲ ಮಾಡಲಾಗಿದ್ದು, ಪರೀಕ್ಷೆ ಬರೆಯುತ್ತಿರುವ ಪ್ರತಿ ವಿದ್ಯಾರ್ಥಿಗೆ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ.
ಓದಿ:ಕೊರೊನಾ ಭೀತಿ: ಇನ್ಮುಂದೆ ಹಾವೇರಿಯಲ್ಲಿ ಠಾಣೆ ಹೊರಗಡೆಯೇ ಪೊಲೀಸರ ಕೆಲಸ
ಪ್ರತಿಯೊಂದು ಪರೀಕ್ಷಾ ಕೇಂದ್ರಕ್ಕೆ ಈಗಾಗಲೇ ಆರು ಲೀಟರ್ ಸಾನಿಟೈಜರ್ ಮತ್ತು ವಿದ್ಯಾರ್ಥಿಗಳನ್ನು ಪರೀಕ್ಷಿಸಲು ಒಂದು ಥರ್ಮೊ ಗನ್ ನೀಡಲಾಗಿದೆ ಎಂದು ಬಿಇಓ ಎನ್.ಶ್ರೀಧರ ತಿಳಿಸಿದರು.