ಹಾವೇರಿ: ಜಿಲ್ಲಾಸ್ಪತ್ರೆ ಶವಾಗಾರದ ಸಿಬ್ಬಂದಿ ಮೇಲೆ ಇದೀಗ ಮೃತದೇಹ ಅದಲು ಬದಲು ಮಾಡಿರುವ ಆರೋಪ ಕೇಳಿಬಂದಿದೆ. ಕಳೆದ ರಾತ್ರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ನೇಶ್ವಿಗ್ರಾಮದ ಮಹಿಳೆ ಮತ್ತು ಹಾವೇರಿ ತಾಲೂಕಿನ ಆಲದಕಟ್ಟಿಯ ಮಹಿಳೆ ಸಾವನ್ನಪ್ಪಿದ್ದರು.
ರಟ್ಟಿಹಳ್ಳಿ ತಾಲೂಕಿನ ನೇಶ್ವಿ ಗ್ರಾಮದ ಮಹಿಳೆಯ ಶವದ ಬದಲು ತಾಲೂಕಿನ ಆಲದಕಟ್ಟಿ ಗ್ರಾಮದಲ್ಲಿ ಮೃತಪಟ್ಟಿದ್ದ ಮಹಿಳೆಯ ಶವವನ್ನ ನೀಡಲಾಗಿದೆ. ಆಲದಕಟ್ಟಿ ಗ್ರಾಮದ ಮೃತ ರೋಜನಬಿ ಕುಟುಂಬಕ್ಕೆ ನೇಶ್ವಿ ಗ್ರಾಮದ ಗದಿಗೆವ್ವಳ ಶವ ನೀಡಲಾಗಿದೆ.
ಗದಿಗೆವ್ವಳ ಮಗಳು ಮತ್ತು ಸಂಬಂಧಿಕರು ಗದಿಗೆವ್ವ ಶವಕ್ಕಾಗಿ ಜಿಲ್ಲಾಸ್ಪತ್ರೆಯ ಶವಾಗಾರದ ಮುಂದೆ ಕಾದು ಕುಳಿತಿದ್ದಾರೆ. ಈಗಾಗಲೇ ಆಲದಕಟ್ಟಿ ಗ್ರಾಮದ ರೋಜನಬಿ ಕುಟುಂಬ ಗದಿಗೆವ್ವಳ ಶವ ಅಂತ್ಯಕ್ರಿಯೆ ನಡೆಸಿದೆ. ಆದರೆ ಗದಿಗೆವ್ವಳ ಮೃತದೇಹಕ್ಕಾಗಿ ಆಕೆಯ ಮಗಳು ಎದುರು ನೋಡುತ್ತಿದ್ದಾಳೆ.
ತಾನು ಮಾಡಿದ ತಪ್ಪು ಸರಿಪಡಿಸಿಕೊಳ್ಳಲು ಶವಾಗಾರದ ಸಿಬ್ಬಂದಿ ಆಲದಕಟ್ಟಿಯಲ್ಲಿ ಧಪನ್ ಮಾಡಿರುವ ಗದಿಗೆವ್ವಳ ಶವವನ್ನು ಹೊರತೆಗೆದು ಹಸ್ತಾಂತರ ಮಾಡಲು ಮುಂದಾಗಿದೆ. ಗದಿಗೆವ್ವಳ ಮಗಳು ತಾಯಿಯ ಮುಖನೋಡಲು ಮುಂದಾದಾಗ ಶವ ಅದಲು ಬದಲಾಗಿರುವುದು ಪತ್ತೆಯಾಗಿದೆ.
ಓದಿ: ಕೊರೊನಾ ಪಾಸಿಟಿವ್ಗೆ ಹೆದರಿ ನೀರು ತುಂಬಿದ ಕ್ವಾರಿಗೆ ಹಾರಿ ಮಹಿಳೆ ಆತ್ಮಹತ್ಯೆ