ETV Bharat / state

ದಕ್ಷಿಣ ಭಾರತದಲ್ಲೇ ಅಪರೂಪವಾದ ದೊಡ್ಡ ಸ್ಫಟಿಕ ಶಿವಲಿಂಗ ಕದ್ದೊಯ್ದ ಖದೀಮರು - ಸ್ಫಟಿಕಲಿಂಗ ಕಳ್ಳತನ ಸುದ್ದಿ

ದಕ್ಷಿಣ ಭಾರತದಲ್ಲೇ‌ ಅತ್ಯಂತ ದೊಡ್ಡ ಸ್ಫಟಿಕಲಿಂಗ ಎಂಬ ಖ್ಯಾತಿ ಹೊಂದಿದ್ದ ಲಿಂಗವನ್ನು ಖದೀಮರು ಕದ್ದೊಯ್ದಿರುವ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ.

Crystal Shiva linga theft in Haveri, Crystal Shiva linga news, Haveri crime news, ಹಾವೇರಿಯಲ್ಲಿ ಸ್ಫಟಿಕಲಿಂಗ ಕಳ್ಳತನ, ಸ್ಫಟಿಕಲಿಂಗ ಕಳ್ಳತನ ಸುದ್ದಿ, ಹಾವೇರಿ ಅಪರಾಧ ಸುದ್ದಿ,
ದಕ್ಷಿಣ ಭಾರತದಲ್ಲೇ‌ ಅತ್ಯಂತ ದೊಡ್ಡ ಸ್ಫಟಿಕಲಿಂಗ ಕಳುವು
author img

By

Published : Jun 7, 2022, 12:43 PM IST

Updated : Jun 7, 2022, 3:36 PM IST

ಹಾವೇರಿ: ಮಠದಲ್ಲಿನ ಸ್ಫಟಿಕಲಿಂಗ ಕಳ್ಳತನವಾದ ಘಟನೆ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಲಿಂಗದಹಳ್ಳಿ ಗ್ರಾಮದಲ್ಲಿ ನಡೆದಿದೆ. ಮಠದ ಬಾಗಿಲು ಮುರಿದಿರುವ ಕಳ್ಳರು ಸ್ಪಟಿಕಲಿಂಗ ಕದ್ದೊಯ್ದಿದ್ದಾರೆ.

ಲಿಂಗದಹಳ್ಳಿ ಹಿರೇಮಠದ ಬಾಗಿಲು ಮುರಿದಿರುವ ಕಳ್ಳರು 13 ಇಂಚು ಉದ್ದ ಮತ್ತು 13 ಇಂಚು ಸುತ್ತಳತೆ ಹೊಂದಿದ್ದ ಸ್ಫಟಿಕ‌ ಲಿಂಗವನ್ನು ಕದ್ದು ಪರಾರಿಯಾಗಿದ್ದಾರೆ. ಇದು ದಕ್ಷಿಣ ಭಾರತದಲ್ಲೇ‌ ಅತ್ಯಂತ ದೊಡ್ಡ ಸ್ಫಟಿಕಲಿಂಗ ಎಂಬ ಖ್ಯಾತಿ ಪಡೆದಿತ್ತು.

ಓದಿ: ಅಪರೂಪದ ಸ್ಫಟಿಕ ಶಿವಲಿಂಗವಿರುವ ವಿಶಿಷ್ಟ ಮಠ: ಸರ್ಕಾರಿ ಹುದ್ದೆಯನ್ನೂ ನಿಭಾಯಿಸ್ತಾರೆ ಪೀಠಾಧಿಪತಿ

ಸೋಮವಾರ ರಾತ್ರಿ ಮಠದಲ್ಲಿ ಶ್ರೀಗಳಾದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಇಲ್ಲದ ವೇಳೆ ಕಳ್ಳರು ಈ ದುಷ್ಕೃತ್ಯ ಎಸಗಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಕುರಿತು ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ದಕ್ಷಿಣ ಭಾರತದಲ್ಲೇ ಅಪರೂಪವಾದ ದೊಡ್ಡ ಸ್ಫಟಿಕ ಶಿವಲಿಂಗ ಕದ್ದೊಯ್ದ ಖದೀಮರು

ಈ ಮಠದಲ್ಲಿ ಸಾವಿರದ ಒಂದು ಶಿವಲಿಂಗಗಳಿವೆ. ಜೊತೆಗೆ, ದೇಶದ ವಿವಿಧೆಡೆ ಇರುವ 12 ಜ್ಯೋತಿರ್ಲಿಂಗಗಳನ್ನೂ ಸಹ ಇಲ್ಲಿ ಸ್ಥಾಪಿಸಲಾಗಿದೆ. ದೇಶದಲ್ಲಿರುವ 18 ಶಕ್ತಿದೇವತೆಗಳು ಈ ಮಠದ ಕಂಬಗಳ ಮೇಲೆ ಅನಾವರಣಗೊಂಡಿವೆ. ದಕ್ಷಿಣ ಭಾರತದಲ್ಲೇ ಅಪರೂಪ ಎನ್ನಿಸುವ ಸ್ಫಟಿಕ ಶಿವಲಿಂಗ ಇಲ್ಲಿದೆ.

Last Updated : Jun 7, 2022, 3:36 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.