ETV Bharat / state

ಹಾವೇರಿಯಲ್ಲಿ ವಿಚಿತ್ರ ಕೊಲೆ.. ಶೌಚಾಲಯದ ಗುಂಡಿ ಮೇಲೆ ಶವ ಹೂತು ಆರೋಪಿಗಳು ಎಸ್ಕೇಪ್​ - ರಟ್ಟಿಹಳ್ಳಿ ತಹಶೀಲ್ದಾರ್ ಅರುಣ್​ಕುಮಾರ್

ವ್ಯಕ್ತಿಯೋರ್ವನನ್ನು ವಿಚಿತ್ರವಾಗಿ ಕೊಲೆ ಮಾಡಿರುವ ಘಟನೆ ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಕಮಲಾಪುರ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ಈರಪ್ಪ ಕುರಿ
ಈರಪ್ಪ ಕುರಿ
author img

By

Published : Sep 14, 2022, 9:56 PM IST

Updated : Sep 14, 2022, 10:17 PM IST

ಹಾವೇರಿ: ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಕಮಲಾಪುರ ಗ್ರಾಮದಲ್ಲಿ ವ್ಯಕ್ತಿಯೊಬ್ಬನನ್ನು ವಿಚಿತ್ರವಾಗಿ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಕೊಲೆಯಾದ ವ್ಯಕ್ತಿಯನ್ನ ಕಮಲಾಪುರ ಗ್ರಾಮದ ಈರಪ್ಪ ಕುರಿ (62)ಯವರು ಎಂದು ಗುರುತಿಸಲಾಗಿದೆ. ಕಳೆದ 30 ರಂದು ಈರಪ್ಪ ಮನೆಯಿಂದ ಸಮುದಾಯ ಭವನಕ್ಕೆ ಮಲಗಲು ತೆರಳಿದ್ದರು ಎನ್ನಲಾಗಿದೆ.

ಕೊಲೆ ಬಗ್ಗೆ ಸಂಬಂಧಿಕರು ಮಾತನಾಡಿರುವುದು

ಎರಡು ದಿನ ಸಂಬಂಧಿಕರು ಸೇರಿದಂತೆ ಬೇರೆ ಊರಿಗೆ ತೆರಳಿರಬಹುದು ಎಂದು ಈರಪ್ಪ ಕುಟುಂಬದವರು ವಿಚಾರಣೆ ನಡೆಸಿದ್ದಾರೆ. ಅಲ್ಲಿ ಈರಪ್ಪ ಪತ್ತೆಯಾಗದ ಹಿನ್ನೆಲೆಯಲ್ಲಿ ಅವರನ್ನು ಹುಡುಕಿಕೊಡಿ ಎಂದು ಕುಟುಂಬದವರು ರಟ್ಟಿಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಈರಪ್ಪ ಕಾಣೆಯಾದ ನಂತರ ಅವನು ಈ ಹಿಂದೆ ಪದೇ ಪದೆ ಹೋಗುತ್ತಿದ್ದ ಗದಿಗೆಪ್ಪ ಸಣ್ಣತಾಯಿ ಮನೆಯವರ ಮೇಲೆ ಈರಪ್ಪನ ಕುಟುಂಬದ ಸದಸ್ಯರು ಶಂಕೆ ವ್ಯಕ್ತಪಡಿಸಿದ್ದರು. ಈರಪ್ಪ ನಾಪತ್ತೆಯಾಗಿ ಮೂರೇ ದಿನಕ್ಕೆ ಗದಿಗೆಪ್ಪ ಸಣ್ಣತಾಯಿ ಮನೆಯವರು ಮನೆ ಖಾಲಿ ಮಾಡಿಕೊಂಡು ಹೋಗಿದ್ದರು.

ಕೊಳೆತ ಶವದ ವಾಸನೆ : ಈ ಕುರಿತಂತೆ ಈರಪ್ಪ ಸಂಬಂಧಿಕರು ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಂತೆ ಎಚ್ಚೆತ್ತುಕೊಂಡ ಪೊಲೀಸರು ಅವರನ್ನು ಹುಡುಕಲು ಪ್ರಾರಂಭಿಸಿದ್ದರು. ಈ ಸಂದರ್ಭದಲ್ಲಿ ಗದಿಗೆಪ್ಪ ಸಣ್ಣತಾಯಿಯವರ ಮನೆ ಹಿಂದೆ ನೋಡಿದಾಗ ಕೊಳೆತ ಶವದ ವಾಸನೆ ಬಂದಿತ್ತು.

ಶೌಚಾಲಯದ ಗುಂಡಿ ಮೇಲೆ ಶವ ಹೂತು ಅದರ ಮೇಲೆ ಎಂಸ್ಯಾಂಡ್ ಹಾಕಿ ಮುಚ್ಚಿಹಾಕಲಾಗಿತ್ತು. ಗದಿಗೆಪ್ಪ ಮತ್ತು ಅವರ ಮನೆಯ ಸದಸ್ಯರು ಸೇರಿ ಈರಪ್ಪನನ್ನ ಕೊಂದು ತಮ್ಮ ಹಿತ್ತಲಿನಲ್ಲಿ ಹೂತುಹಾಕಿ ಮನೆ ಖಾಲಿ ಮಾಡಿಕೊಂಡು ಹೋಗಿದ್ದಾರೆ ಎಂದು ಈರಪ್ಪ ಸಂಬಂಧಿಕರು ಆರೋಪಿಸಿದ್ದಾರೆ.

ಮರಣೋತ್ತರ ಪರೀಕ್ಷೆ: ಈರಪ್ಪ ಆಗಾಗ ಗದಿಗೆಪ್ಪರ ಮನೆಗೆ ಹೋಗಿ ಬರುತ್ತಿದ್ದ. ಈಗ ಅವರೇ ಈರಪ್ಪನ ಕೊಲೆ ಮಾಡಿದ್ದಾರೆ. ಅವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಈರಪ್ಪನ ಸಂಬಂಧಿಕರು ಒತ್ತಾಯಿಸಿದ್ದಾರೆ. ಕೊಲೆ ಆರೋಪ ಹಿನ್ನೆಲೆಯಲ್ಲಿ ಹೂತುಹಾಕಿದ್ದ ಶವವನ್ನ ತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಯಿತು.

ರಟ್ಟಿಹಳ್ಳಿ ತಹಶೀಲ್ದಾರ್ ಅರುಣ್​ಕುಮಾರ್​ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಮರಣೋತ್ತರ ಪರೀಕ್ಷೆ ನಂತರ ಶವವನ್ನ ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು. ಶವ ನೀಡುತ್ತಿದ್ದಂತೆ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿತ್ತು.

ಓದಿ: 2 ಸಾವಿರಕ್ಕಾಗಿ ಗಂಡ ಹೆಂಡತಿ ನಡುವೆ ಕಿತ್ತಾಟ.. ಪೋಷಕರ ಮನೆಗೆ ಕರೆಸಿ ಪತಿಗೆ ಥಳಿತ.. ಆ್ಯಸಿಡ್​ ಎರಚಿ ಕ್ರೌರ್ಯ

Last Updated : Sep 14, 2022, 10:17 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.