ಹಾವೇರಿ: ಜಿಲ್ಲೆಯ ರಾಣೆಬೆನ್ನೂರು ತಾಲೂಕಿನಲ್ಲಿಂದು ಮೂವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ರಾಣೆಬೆನ್ನೂರಿನ ವಾಗೀಶ ನಗರ, ಕೊರವರ ಓಣಿ ಮತ್ತು ಮೃತ್ಯುಂಜಯ ನಗರದ ಮೂವರು ಪುರುಷರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂವರು ಯಾವುದೇ ಸಂಪರ್ಕ ಹಾಗೂ ಟ್ರಾವೆಲ್ ಹಿಸ್ಟರಿ ಹೊಂದಿಲ್ಲ ಎನ್ನಲಾಗಿದೆ. ಸೋಂಕಿತರು ವಾಸಿಸುತ್ತಿದ್ದ 100 ಮೀಟರ್ ಪ್ರದೇಶವನ್ನ ಸೀಲ್ ಡೌನ್ ಮಾಡಲಾಗಿದ್ದು, ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ.
ವಿಧಾನಸಭೆ ಮಾಜಿ ಅಧ್ಯಕ್ಷ ಕೆ.ಬಿ.ಕೋಳಿವಾಡರ ಮನೆ ಇರುವ ವಾಗೀಶ ನಗರದಲ್ಲಿ ಕೊರೊನಾ ಪ್ರಕರಣ ಪತ್ತೆಯಾಗಿದೆ. ಈ ಹಿನ್ನೆಲೆ ಕೋಳಿವಾಡರ ಮನೆಗೆ ಸಾರ್ವಜನಿಕರ ಪ್ರವೇಶ ನಿಷೇಧಿಸಿ ಬೀಗ ಹಾಕಲಾಗಿದೆ.