ETV Bharat / state

ಅಮ್ಮನ ಅಂತ್ಯಕ್ರಿಯೆಗೆ ಬಂದ ಕಾನ್​ಸ್ಟೇಬಲ್​ಗೂ ಕೊರೊನಾ ಸೋಂಕು

ಬೆಂಗಳೂರಿನ ಚಾಮರಾಜಪೇಟೆಯ ಸಿಎಆರ್ ಹೆಡ್ ಕ್ವಾಟ್ರಸ್​​ನಲ್ಲಿ ಪೊಲೀಸ್ ಕಾನ್​ಸ್ಟೇಬಲ್ ಆಗಿದ್ದ 27 ವರ್ಷದ ಯುವಕ ಹಾಗೂ ಸವಣೂರಿನ ಮಹಿಳೆಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಕಾನ್​ಸ್ಟೇಬಲ್​ಗೂ ಕೊರೊನಾ ಅಟ್ಯಾಕ್​
ಕಾನ್​ಸ್ಟೇಬಲ್​ಗೂ ಕೊರೊನಾ ಅಟ್ಯಾಕ್​
author img

By

Published : Jun 28, 2020, 9:48 AM IST

ಸವಣೂರು (ಹಾವೇರಿ): ತಾಯಿಯ ಅಂತ್ಯಕ್ರಿಯೆಗೆಂದು ಬಂದ ಪೊಲೀಸ್​ ಕಾನ್​ಸ್ಟೇಬಲ್​ಗೆ ಕೊರೊನಾ ಸೋಂಕು ದೃಢಪಟ್ಟಿದೆ. ಕಿಡ್ನಿ ಸ್ಟೋನ್​ ಆಗಿದೆ ಎಂದು ಆಸ್ಪತ್ರೆಗೆ ತೆರಳಿದ್ದ ಮಹಿಳೆಗೆ ಕೊರೊನಾ ಟೆಸ್ಟ್​ ಮಾಡಿಸಿದ್ದು, ಆಕೆಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ಘಟನೆ ಸವಣೂರಿನಲ್ಲಿ ನಡೆದಿದೆ.

ಬೆಂಗಳೂರಿನ ಚಾಮರಾಜಪೇಟೆಯ ಸಿಎಆರ್ ಹೆಡ್ ಕ್ವಾಟ್ರಸ್​​ನಲ್ಲಿ ಪೊಲೀಸ್ ಕಾನ್​ಸ್ಟೇಬಲ್ ಆಗಿದ್ದ 27 ವರ್ಷದ ಯುವಕನ ತಾಯಿ ಮೃತಪಟ್ಟಿದ್ದರು. ಅಂತ್ಯಕ್ರಿಯೆಗೆಂದು ಅವರು ಊರಿಗೆ ಬಂದಿದ್ದರು. ಈ ವೇಳೆ ಇಲಾಖೆಯ ನಿರ್ದೇಶನದಂತೆ ಕೋವಿಡ್ ಟೆಸ್ಟ್​ಗೆ ಗಂಟಲು ದ್ರವದ ಮಾದರಿಯನ್ನು ಲ್ಯಾಬ್​ಗೆ ಕೊಟ್ಟಿದ್ದಾರೆ. ಬೆಂಗಳೂರಿನಿಂದ ರಾತ್ರಿ 11ಗಂಟೆಗೆ ಬಸ್​ ಹತ್ತಿದ್ದು, ಬೆಳಗ್ಗೆ 6 ಗಂಟೆಗೆ ಹಾವೇರಿ ಬಸ್​ ನಿಲ್ದಾಣಕ್ಕೆ ಬಂದಿದ್ದಾರೆ. ಬಳಿಕ ಅಲ್ಲಿಂದ ಸವಣೂರಿಗೆ ಬಸ್​ ಮೂಲಕ ಹೋಗಿ, ನಂತರ ಬೈಕ್​ ಮೂಲಕ ತನ್ನ ಊರು ತಲುಪಿದ್ದಾರೆ. ಅಂತ್ಯಕ್ರಿಯೆ ಮುಗಿದ ಬಳಿಕ ಮನೆಯಲ್ಲೇ ಇದ್ದ ಈತನಿಗೆ ಕೊರೊನಾ ದೃಢಪಟ್ಟಿದೆ ಎಂಬ ವರದಿ ಬಂದಿದೆ. ಸದ್ಯ ಅವರನ್ನು ಸವಣೂರು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾನ್​ಸ್ಟೇಬಲ್ ಜೊತೆ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕ ಹೊಂದಿದ್ದ 11 ಜನರನ್ನು ಜಿಲ್ಲಾಡಳಿತ ಕ್ವಾರಂಟೈನ್ ಮಾಡಿದೆ.

ಕಾನ್​ಸ್ಟೇಬಲ್​ಗೂ ಕೊರೊನಾ ಅಟ್ಯಾಕ್​

ಮಹಿಳೆಯ ಕಿಡ್ನಿಯಲ್ಲಿ ಸ್ಟೋನ್​ ಆಗಿದೆ ಎಂದು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಹೋಗಿ ಬಂದಿದ್ದಾಳೆ. ಬಳಿಕ ಹುಬ್ಬಳ್ಳಿಯ ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡು, ಸಾರಿಗೆ ಬಸ್ ಮೂಲಕ ಶಿಗ್ಗಾಂವಿ ಪಟ್ಟಣಕ್ಕೆ ಬಂದಿದ್ದಳು. ಬಸ್ ನಿಲ್ದಾಣದಿಂದ ಆಟೋರಿಕ್ಷಾದ ಮೂಲಕ‌ ಮನೆ ತಲುಪಿದ್ದಾಳೆ. ಇನ್ನು ಆಸ್ಪತ್ರೆಯಿಂದ ಚಿಕಿತ್ಸೆ ಪಡೆದು ಹಿಂತಿರುಗುವಾಗ ಆಕೆಯ ಗಂಟಲು ದ್ರವವನ್ನು ಕೊರೊನಾ ಟೆಸ್ಟ್​ಗೆ ತೆಗೆದುಕೊಳ್ಳಲಾಗಿತ್ತು. ಸದ್ಯ ವರದಿ ಬಂದಿದ್ದು, ಆಕೆಗೂ ಕೊರೊನಾ ಇರುವುದು ದೃಢವಾಗಿದೆ.

ಕಾನ್​ಸ್ಟೇಬಲ್ ಹಾಗೂ ಮಹಿಳೆ ಬಂದಿರುವ ಬಸ್ ಚಾಲಕ ಮತ್ತು ನಿರ್ವಾಹಕರನ್ನು ಗುರುತಿಸಿ ತಪಾಸಣೆಗೆ ಒಳಪಡಿಸುವಂತೆ ಜಿಲ್ಲಾಡಳಿತ ಸಾರಿಗೆ ಇಲಾಖೆಗೆ ಪತ್ರ ಬರೆದಿದೆ. ಮಾತ್ರವಲ್ಲದೆ, ಆ‌ ದಿನ ಬಸ್ಸಿನಲ್ಲಿ ಪ್ರಯಾಣಿಸಿರುವ ಜನರು ಸ್ವಯಂಪ್ರೇರಿತರಾಗಿ ಕೋವಿಡ್-19 ತಪಾಸಣೆಗೆ ಒಳಗಾಗುವಂತೆ ಜಿಲ್ಲಾಡಳಿತ‌ ಮನವಿ ಮಾಡಿದೆ. ಇದರ ಜೊತೆಗೆ ಸೋಂಕಿತರ ಜೊತೆ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರನ್ನ ಪತ್ತೆ ಮಾಡಿ ಕ್ವಾರಂಟೈನ್ ಮಾಡುವ ಕೆಲಸವನ್ನು ತುರ್ತಾಗಿ ಮಾಡಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.