ETV Bharat / state

ಹಾವೇರಿ: 3 ಗರ್ಭೀಣಿಯರು ಸೇರಿ 50 ಜನರಿಗೆ ಕೊರೊನಾ - Haveri Corona News

ಹಾವೇರಿಯಲ್ಲಿ ಬುಧವಾರ 50 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

Haveri
ಹಾವೇರಿ: ಮೂವರು ಗರ್ಭೀಣಿಯರು ಸೇರಿದಂತೆ 50 ಜನರಿಗೆ ಕೊರೊನಾ..
author img

By

Published : Jul 30, 2020, 9:27 AM IST

ಹಾವೇರಿ: ಜಿಲ್ಲೆಯಲ್ಲಿ ಬುಧವಾರ ಮೂವರು ಗರ್ಭೀಣಿಯರು ಸೇರಿದಂತೆ 50 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಜಿಲ್ಲಾಸ್ಪತ್ರೆಯ ಇಬ್ಬರು ಲ್ಯಾಬ್ ಟೆಕ್ನಿಷಿಯನ್‌ ಹಾಗೂ ಓರ್ವ ವೈದ್ಯನಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಜಿಲ್ಲಾ ಕಾರಾಗೃಹದ ಸಹಾಯಕ ಜೈಲರ್​ಗೂ ಸಹ ಕೊರೊನಾ ತಗುಲಿದೆ. ಕಾಗಿನೆಲೆಯ ಮೂವರು ಕಾನ್ಸ್​ಟೇಬಲ್​​ಗಳು, ಹಿರೇಕೆರೂರು ಪೊಲೀಸ್ ಠಾಣೆಯ ಇಬ್ಬರು ಕಾನ್ಸ್​ಟೇಬಲ್​​​ಗಳಿಗೂ ಸೋಂಕು ದೃಢಪಟ್ಟಿದೆ. ಕುಮಾರಪಟ್ಟಣ, ಕರ್ಜಗಿ ಮತ್ತು ಬಂಕಾಪುರದ ಪೊಲೀಸ್ ಠಾಣೆಯ ತಲಾ ಓರ್ವ ಕಾನ್ಸ್​ಟೇಬಲ್​​ಗೆ ಸೋಂಕು ತಗುಲಿದೆ.

ಇನ್ನು ಶಿಗ್ಗಾವಿಯ ತಹಶೀಲ್ದಾರ್ ಕಚೇರಿಗೆ ಸಿಬ್ಬಂದಿಯೊಬ್ಬನಿಗೆ ಕೊರೊನಾ ಪತ್ತೆಯಾಗಿದೆ. ಅಲ್ಲದೇ ಕಾರಡಗಿ ಪಶು ಆಸ್ಪತ್ರೆಯ ಡಿ ದರ್ಜೆಯ ನೌಕರನಿಗೆ ಸಹ ಕೊರೊನಾ ಕಾಣಿಸಿಕೊಂಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.