ಹಾವೇರಿ: ರಾಜ್ಯದಲ್ಲಿ ಇನ್ನೇರಡು ದಿನ ಕೊರೊನಾ ಟೆಸ್ಟ್‌ಗಳ ಲ್ಯಾಬ್ ರಿಪೋರ್ಟ್ ವಿಳಂಬವಾಗಲಿದೆ. ಬಳಿಕ ಕೊರೊನಾ ಲ್ಯಾಬ್ ರಿಪೋರ್ಟ್‌ಗಳ ವರದಿ ವಿಳಂಬವಾಗುವುದಿಲ್ಲ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಹಾವೇರಿಯಲ್ಲಿ ಮಾತನಾಡಿದ ಅವರು, ರ‍್ಯಾಪಿಡ್ ಆಂಟಿಜನ್ ಟೆಸ್ಟ್ ಪ್ರಾರಂಭವಾಗುತ್ತಿದ್ದಂತೆ ಲ್ಯಾಬ್‌ಗಳ ಮೇಲಿನ ಒತ್ತಡ ಕಡಿಮೆಯಾಗಲಿದೆ ಎಂದರು.
ನೂತನ ಲ್ಯಾಬ್‌ನಲ್ಲಿ ಸಿಬ್ಬಂದಿ ಕೊರತೆ ಇರುವ ಕಾರಣ ಫಲಿತಾಂಶಗಳು ವಿಳಂಬವಾಗುತ್ತಿವೆ. ಬರುವ ದಿನಗಳಲ್ಲಿ ಆಂಟಿಜನ್ ಪರೀಕ್ಷೆಗಳನ್ನ ಹೆಚ್ಚು ಮಾಡುವುದರಿಂದ 24 ಗಂಟೆಯಲ್ಲಿ ಫಲಿತಾಂಶ ಸಿಗಲಿದೆ ಎಂದು ತಿಳಿಸಿದರು.