ಹಾವೇರಿ: ಕೊರೊನಾ ಸೋಂಕಿತ ವ್ಯಕ್ತಿ ಗುಣಮುಖನಾದ ಹಿನ್ನೆಲೆಯಲ್ಲಿ ಇಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.
ಸೋಂಕಿತ ವ್ಯಕ್ತಿ ಹಾವೇರಿ ಜಿಲ್ಲೆ ಸವಣೂರು ಪಟ್ಟಣದ ಎಸ್.ಎಂ.ಕೃಷ್ಣ ನಗರದ ನಿವಾಸಿಯಾಗಿದ್ದು, ನಲ್ವತ್ತು ವರ್ಷದವನಾಗಿದ್ದಾನೆ. ಮುಂಬೈಗೆ ಹೋಗಿ ಬಂದಿದ್ದ P-672 ರೋಗಿಗೆ ಮೇ 5ರಂದು ಕೊರೊನಾ ದೃಢಪಟ್ಟಿತ್ತು. ಇಂದು ಬೆಳಿಗ್ಗೆ ಹತ್ತೂವರೆ ಗಂಟೆಗೆ ಆಸ್ಪತ್ರೆಯಿಂದ ವ್ಯಕ್ತಿ ಬಿಡುಗಡೆಯಾಗಿದ್ದಾನೆ.