ಹಾವೇರಿ: ಮದುವೆ ಮನೆಗೆ ಕೊರೊನಾ ಸೋಂಕಿತ ಮಹಿಳೆಯೊಬ್ಬರು ಬಂದಿದ್ದರಿಂದ, ಮದುವೆ ಮುಂದೂಡಲಾಗಿದೆ. ಹಾವೇರಿಯ ನಾಗೇಂದ್ರನಮಟ್ಟಿಯಲ್ಲಿ ಇಂದು ಮದುವೆ ನಡೆಯಬೇಕಿತ್ತು.
ಮದುವೆಗೆ ಬಂದಿದ್ದ ಸಂಬಂಧಿಯೊಬ್ಬರ ಗಂಟಲು ದ್ರವ ಟೆಸ್ಟನಲ್ಲಿ ಕೊರೊನಾ ಪಾಸಿಟಿವ್ ಬಂದಿದೆ. ಇದರಿಂದ ಮದುವೆಯಾಗಬೇಕಿದ್ದ ವಧು ಸೇರಿದಂತೆ ಇಪ್ಪತ್ತು ಜನರನ್ನು ಕ್ವಾರಂಟೈನ್ಗೆ ಒಳಪಡಿಸಲಾಗಿದೆ. ಮದುವೆಗೆ ಬಂದಿದ್ದ ಮಹಿಳೆ ಕ್ಯಾನ್ಸರ್ ಸಮಸ್ಯೆಯಿಂದ ಬಳಲುತ್ತಿದ್ದಳು ಎನ್ನಲಾಗಿದೆ.
ಮಹಿಳೆಗೆ ಕ್ಯಾನ್ಸರ್ ಇದ್ದಿದ್ದರಿಂದ ಸ್ವ್ಯಾಬ್ ಸಂಗ್ರಹಿಸಿ ಆರೋಗ್ಯ ಇಲಾಖೆ ಲ್ಯಾಬ್ ಗೆ ಕಳಿಸಿತ್ತು. ಸ್ವ್ಯಾಬ್ ನೀಡಿದ್ದ ಮಹಿಳೆ ಚಿಕಿತ್ಸೆಗೆಂದು ಮಂಗಳೂರಿಗೆ ಹೋಗಿದ್ದಾರೆ. ಆದರೆ ಮಹಿಳೆಯಲ್ಲಿ ಕೊರೊನಾ ದೃಢಪಟ್ಟಿದ್ದರಿಂದ ಅಧಿಕಾರಿಗಳು ಮದುವೆ ಮುಂದೂಡಿದ್ದಾರೆ.
ಸೋಂಕಿತೆ ವಾಸವಾಗಿದ್ದ ಪ್ರದೇಶವನ್ನು ಸೀಲ್ ಡೌನ್ ಮಾಡಿರುವ ಪೊಲೀಸರು, ಪ್ರಾಥಮಿಕ ಮತ್ತು ದ್ವಿತಿಯ ಸಂಪರ್ಕಿತ 20 ಜನರನ್ನ ಕ್ವಾರಂಟೈನ್ ಮಾಡಿದ್ದಾರೆ.