ETV Bharat / state

ಹಾವೇರಿ: ವಾರದ ಹಿಂದೆ ಮದುವೆಗೆ ಹೋಗಿ ಬಂದಿದ್ದ ಯುವತಿಗೆ ಕೊರೊನಾ

author img

By

Published : Jul 3, 2020, 8:00 PM IST

ಹಾವೇರಿಯಲ್ಲಿ ಇಂದು ಒಂದು ಕೊರೊನಾ ಪ್ರಕರಣ ಕಾಣಿಸಿಕೊಂಡಿದ್ದು, ಸೋಂಕಿತರ ಸಂಖ್ಯೆ 124ಕ್ಕೆ ಏರಿಕೆ ಕಂಡಿದೆ.

corona virus
ಕೊರೊನಾ ವೈರಸ್​

ಹಾವೇರಿ: ಜಿಲ್ಲೆಯಲ್ಲಿ ಶುಕ್ರವಾರ ಸವಣೂರು ತಾಲೂಕಿನ ಮನ್ನಂಗಿ ಗ್ರಾಮದ 19 ವರ್ಷದ ಯುವತಿಗೆ ಕೊರೊನಾ ತಗುಲಿದೆ ಎಂದು ಹೆಲ್ತ್ ಬುಲೆಟಿನ್​​​​​ನಲ್ಲಿ ಜಿಲ್ಲಾಡಳಿತ ತಿಳಿಸಿದೆ. ಈ ಮೂಲಕ ಪೀಡಿತರ ಸಂಖ್ಯೆ 124ಕ್ಕೇರಿದೆ.

ಏಳು ದಿನಗಳ ಹಿಂದೆ ಶಿವಮೊಗ್ಗದಲ್ಲಿ ನಡೆದ ಸಂಬಂಧಿಕರ ಮದುವೆಗೆ ಯುವತಿ ಹೋಗಿ ಬಂದಿದ್ದಳು. ಈ ಹಿನ್ನೆಲೆಯಲ್ಲಿ ಜೂನ್ 26 ರಂದು ಸ್ವಾಬ್​ ಸಂಗ್ರಹಿಸಿ ಪರೀಕ್ಷೆಗೆ ಕಳಿಸಲಾಗಿತ್ತು. ಅದರ ಫಲಿತಾಂಶ ಪಾಸಿಟಿವ್ ಬಂದಿದೆ. ಯುವತಿಯ ಪ್ರಥಮ ಮತ್ತು ದ್ವಿತೀಯ ಸಂಪರ್ಕಿತರ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಹಾವೇರಿ ಜಿಲ್ಲಾಸ್ಪತ್ರೆ

ಯುವತಿ ವಾಸಿಸುತ್ತಿದ್ದ ಮನೆಯ ಸುತ್ತಮುತ್ತ ನೂರು ಮೀಟರ್ ಕಂಟೇನ್​ಮೆಂಟ್​ ವಲಯ ಎಂದು ಘೋಷಿಸಲಾಗಿದೆ. ಮನ್ನಂಗಿ ಗ್ರಾಮವನ್ನ ಬಫರ್ ಝೋನ್ ಎಂದು ಗುರುತಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.