ಹಾವೇರಿ : ಬಿಎಸ್‌ವೈ ರಾಜಕೀಯದಲ್ಲಿ ಸಾಕಷ್ಟು ಏಳುಬೀಳುಗಳನ್ನು ಕಂಡಿದ್ದಾರೆ. 40 ವರ್ಷಗಳ ಕಾಲ ರಾಜಕೀಯದಲ್ಲಿ ಉಳಿಪೆಟ್ಟು ತಿಂದು ಮೂರ್ತಿಯಾಗಿದ್ದಾರೆ. ಅವರಂತೆ ಮುಂದೆ ಬಿ.ವೈ.ವಿಜಯೇಂದ್ರ ರಾಜಾಹುಲಿಯಾಗುತ್ತಾರೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.
ಜಿಲ್ಲೆಯ ಹಿರೇಕೆರೂರು ತಾಲೂಕಿನ ಬಸರೀಕಟ್ಟಿಯಲ್ಲಿ ಹೆಲಿಪ್ಯಾಡ್ ಉದ್ಘಾಟಿಸಿ ಮಾತನಾಡಿದ ಅವರು, ಬಿ.ವೈ.ವಿಜಯೇಂದ್ರ ಈಗಾಗಲೇ 60 ಪ್ರತಿಶತ ಉಳಿಪೆಟ್ಟು ತಿಂದಿದ್ದಾರೆ. ಅವರು ಮುಂದೆ ರಾಜಾಹುಲಿಯಾಗಿ ರಾಜ್ಯಕ್ಕೆ ಸೇವೆ ಸಲ್ಲಿಸಲಿದ್ದಾರೆ ಎಂದರು.
ಟಿವಿ, ಬೈಕ್, ಫ್ರಿಡ್ಜ್ ಇದ್ದವರಿಗೆ ಪಡಿತರ ರದ್ದು ಮಾಡುವ ಕುರಿತ ಸಚಿವ ಉಮೇಶ್ ಕತ್ತಿ ಹೇಳಿಕೆಯನ್ನು ನಾನು ಸರಿಯಾಗಿ ತಿಳಿದುಕೊಂಡಿಲ್ಲ. ಆ ರೀತಿ ಮಾಡಿದರೆ ತಪ್ಪು. ಆದರೆ, ಅನಧಿಕೃತ ಪಡಿತರ ಚೀಟಿ ರದ್ದು ಮಾಡುವುದರಲ್ಲಿ ತಪ್ಪಿಲ್ಲ ಎಂದರು.