ಹಾವೇರಿ : ಜಿಲ್ಲೆಯ ಹೊರವಲಯದ ನಾಗೇಂದ್ರನಮಟ್ಟಿಯಲ್ಲಿರುವ ಅಲೆಮಾರಿ ಸುಡುಗಾಡು ಸಿದ್ದರ ಕನಸು ನನಸಾಗುತ್ತಿದೆ. ಸ್ವಂತ ಸೂರಿನ ಕನಸು ಕಂಡಿದ್ದ ಈ ಕುಟುಂಬಗಳಿಗೆ ಗೃಹ ಸಮುಚ್ಚಯಗಳು ಸಿದ್ಧವಾಗುತ್ತಿವೆ. ಹಾವೇರಿ ನಗರಸಭೆಯು ಸುಡುಗಾಡು ಸಿದ್ದರು ಸೇರಿದಂತೆ ನಿರ್ಗತಿಕರಿಗೆ ನಾಗೇಂದ್ರನ ಮಟ್ಟಿಯ ಶಾಂತಿನಗರದಲ್ಲಿ ವಸತಿ ಸಮುಚ್ಚಯಗಳನ್ನು ನಿರ್ಮಿಸಲಾಗುತ್ತಿದೆ.
ಹೌದು, ರಾಜೀವ್ ಗಾಂಧಿ ವಸತಿ ನಿಗಮ ಯೋಜನೆಯಲ್ಲಿ 200 ಫಲಾನುಭವಿಗಳಿಗೆ ಮನೆ ಕಟ್ಟಿಸಿ ಕೊಡಲು ನಗರಸಭೆ ಗುತ್ತಿಗೆ ನೀಡಿದೆ. ಈ ಗುತ್ತಿಗೆ ಪಡೆದಿರುವ ಕಂಪನಿಯು ಕಟ್ಟಡ ನಿರ್ಮಿಸುತ್ತಿದೆ. ಈಗಾಗಲೇ ಕಾಮಗಾರಿ ಆರಂಭವಾಗಿದ್ದು, ಮುಂದಿನ ಎರಡು ವರ್ಷಗಳಲ್ಲಿ ಈ ಮನೆಗಳಲ್ಲಿ ವಾಸ ಮಾಡುವ ಆಸೆಯನ್ನು ಸುಡುಗಾಡು ಸಿದ್ದರು ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಮಳೆಗೆ ನಲುಗಿದ ಅಲೆಮಾರಿ ಜನಾಂಗ... ಸುಡುಗಾಡು ಸಿದ್ದರ ಗೋಳು ಕೇಳೋರು ಯಾರು ?
ಸುಡುಗಾಡು ಸಿದ್ದರು ಸುಮಾರು 40 ವರ್ಷಗಳಿಂದ ಹಾವೇರಿ ನಗರದಲ್ಲಿದ್ದಾರೆ. ದಾನೇಶ್ವರಿ ನಗರ ಸೇರಿದಂತೆ ವಿವಿಧ ಕಡೆ ಮನೆ ಮಾಡಿಕೊಂಡಿರುವ ಈ ಕುಟುಂಬಗಳು 2019 ರ ನೆರೆಗೆ ನಲುಗಿದ್ದವು. ಅಂದು ಈ ಕುಟುಂಬಗಳಿಗೆ ನಾಗೇಂದ್ರನಮಟ್ಟಿ ಸರ್ಕಾರಿ ಶಾಲೆಯಲ್ಲಿ ಗಂಜಿ ಕೇಂದ್ರ ತೆಗೆದು ರಕ್ಷಣೆ ನೀಡಲಾಗಿತ್ತು. ಜೊತೆಗೆ ಅಲೆಮಾರಿಗಳಾಗಿರುವ ಸುಡುಗಾಡು ಸಿದ್ದರ 26 ಕುಟುಂಬಗಳಿಗೆ ಅಂದು ಅಧಿಕಾರಿಗಳು, ಜನಪ್ರತಿನಿಧಿಗಳು ಶಾಶ್ವತ ಸೂರು ಕಲ್ಪಿಸುವ ಭರವಸೆ ನೀಡಿದ್ದರು. ಅದರಂತೆ ಶಾಂತಿನಗರದಲ್ಲಿರುವ 7 ಎಕರೆ ಜಮೀನಿನಲ್ಲಿ ತಾತ್ಕಾಲಿಕವಾಗಿ ತಗಡಿನ ಶೆಡ್ ನಿರ್ಮಿಸಲಾಗಿತ್ತು.
ಇದನ್ನೂ ಓದಿ : ಹಲವು ತಿಂಗಳಿಂದ ಸಿಗದ ವೇತನ ; ಇಂದಿರಾ ಕ್ಯಾಂಟೀನ್ ಸ್ವಚ್ಚತಾ ಸಿಬ್ಬಂದಿಯ ಗೋಳು ಕೇಳೋರಿಲ್ಲ
ಗಾಳಿ, ಮಳೆ, ಚಳಿಯಲ್ಲೇ ಈ ಕುಟುಂಬಗಳು ಮೂರು ವರ್ಷ ಜೀವನ ಕಳೆದಿದ್ದವು. ಇದೀಗ, ಈ ಜಾಗದಲ್ಲಿ ನೂತನ ಗೃಹ ಸಮುಚ್ಚಯಗಳು ನಿರ್ಮಾಣವಾಗುತ್ತಿದ್ದು, ಅಧಿಕಾರಿಗಳು ಇಲ್ಲಿದ್ದ 26 ಕುಟುಂಬಗಳನ್ನು ಬೇರೆ ಕಡೆ ಇರುವಂತೆ ತಿಳಿಸಿದ್ದಾರೆ. ಹಾಗಾಗಿ, ಕುಟುಂಬಗಳು ಶೆಡ್ ಜಾಗ ತೊರೆದಿದ್ದು, ನಾಗೇಂದ್ರನ ಮಟ್ಟಿಯಲ್ಲಿರುವ ಖಾಲಿ ನಿವೇಶನಗಳಲ್ಲಿ ತಾತ್ಕಾಲಿಕ್ ಶೆಡ್ ನಿರ್ಮಿಸಿ ವಾಸಿಸುತ್ತಿವೆ.
ಇದನ್ನೂ ಓದಿ : ಮೈಸೂರಿನಲ್ಲೂ ಬಿಡಿಎ ಮಾದರಿ ವಸತಿ ಸಮುಚ್ಚಯ ನಿರ್ಮಾಣ : ಮುಡಾ ಅಧ್ಯಕ್ಷ
"ಕಳೆದ ಹಲವು ವರ್ಷಗಳಿಂದ ನಾವು ನಾಗೇಂದ್ರನಮಟ್ಟಿ ನಿವಾಸಿಗಳಾಗಿದ್ದೇವೆ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ನಮಗೆ ರಾಜೀವ್ ಗಾಂಧಿ ವಸತಿ ನಿಗಮ ಯೋಜನೆಯಡಿ ಮನೆ ನಿರ್ಮಿಸುತ್ತಿರುವ ಕುರಿತಂತೆ ಈಗಾಗಲೇ ಹಾವೇರಿ ನಗರಸಭೆಯ ಆಶ್ರಯ ಸಮಿತಿ ತಮಗೆ ಹಕ್ಕುಪತ್ರ ನೀಡಿದೆ" ಎಂದು ಕುಟುಂಬಗಳ ಸದಸ್ಯರು ಸಂತಸದಿಂದ ಮಾಹಿತಿ ನೀಡಿದ್ದಾರೆ. ಜೊತೆಗೆ, ಸರ್ಕಾರ ಮತ್ತು ಗುತ್ತಿಗೆದಾರರು ಆದಷ್ಟು ಬೇಗ ವಸತಿ ಸಮುಚ್ಚಯ ಕಾಮಗಾರಿ ಮುಗಿಸಿ ಮನೆಗಳನ್ನು ಹಸ್ತಾಂತರಿಸಬೇಕು ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ : ಉಕ್ರೇನ್ನ ವಸತಿ ಸಮುಚ್ಚಯದ ಮೇಲೆ ರಷ್ಯಾ ಕ್ಷಿಪಣಿ ದಾಳಿ.. ಕಟ್ಟಡ ಧ್ವಂಸ