ಹಾವೇರಿ: ಮತ್ತೆ ಅಧಿಕಾರಕ್ಕೆ ಬರುವ ವಿಶ್ವಾಸದಿಂದ ರಾಜ್ಯಾದ್ಯಂತ ಜನಸಂಕಲ್ಪ ಯಾತ್ರೆ ಮಾಡ್ತಿದ್ದೇವೆ. ಜನರ ಉತ್ಸಾಹ ಇಮ್ಮಡಿ ಆಗಿದೆ. ಜನರು ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರುವ ಸಂಕಲ್ಪ ಮಾಡಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಅಭಿಪ್ರಾಯಪಟ್ಟಿದ್ದಾರೆ.
ಹಾವೇರಿ ಜಿಲ್ಲೆ ಮೋಟೆಬೆನ್ನೂರಲ್ಲಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾರ್ಯಕ್ರಮಗಳಿಂದ ಬೆಂಬಲ ಸಿಗ್ತಿದೆ ಎಂದು ತಿಳಿಸಿದರು. ಜನಸಂಕಲ್ಪ ಯಾತ್ರೆ ಕುರಿತ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸಿದ್ದರಾಮಯ್ಯ ಹೇಳಿದ್ದು ಯಾವುದೂ ಆಗೋದಿಲ್ಲ ಎಂದು ಅಭಿಪ್ರಾಯಪಟ್ಟರು.
ಅವರಪ್ಪನಾಣೆಗೆ ಯಡಿಯೂರಪ್ಪ ಸಿಎಂ ಆಗೋದಿಲ್ಲ ಅಂದಿದ್ರು, ಆದರೆ ಸಿಎಂ ಆದರು. ಅವರು ಜನಾಶೀರ್ವಾದ ಯಾತ್ರೆ ಮಾಡಿದ್ದರು.
ಅವರಿಗೆ ಜನರು ಆಶೀರ್ವಾದ ಮಾಡಲಿಲ್ಲ ಎಂದು ಬೊಮ್ಮಾಯಿ ತಿಳಿಸಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿಕೆ ವಿಚಾರ ಇದು ಚುನಾವಣೆ ಪ್ರಶ್ನೆ ಅಲ್ಲ. ಕೊಳಕು ಮನಸ್ಥಿತಿ. ಧಾರ್ಮಿಕ ಪರಂಪರೆ ಪದೇ ಪದೆ ಕೆಣಕೋದು ಎಷ್ಟರ ಮಟ್ಟಿಗೆ ಸರಿ? ಎಂದು ಬೊಮ್ಮಾಯಿ ಪ್ರಶ್ನಿಸಿದರು. ಅವರ ಮಾತಿನಿಂದ ದೇಶದ ಜನರಿಗೆ ಸಾಕಷ್ಟು ನೋವಾಗಿದೆ. ಅವರ ನೀತಿಯಿಂದಲೇ ಆಂತರಿಕ ಆಡಳಿತಕ್ಕೆ ಅಭದ್ರತೆ ಉಂಟಾಗುತ್ತದೆ. ಇಷ್ಟೆಲ್ಲ ಹೇಳಿದ್ರೂ ಸಿದ್ದರಾಮಯ್ಯ, ರಾಹುಲ್ ಗಾಂಧಿ ಅಭಿಪ್ರಾಯ ಏನು ಎಂದು ಬೊಮ್ಮಾಯಿ ಪ್ರಶ್ನಿಸಿದರು.
ಅವರ ಕಾರ್ಯಾಧ್ಯಕ್ಷರ ಮೇಲೆ ಕ್ರಮ ಕೈಗೊಳ್ತಾರಾ.? ಇವರು ದೇಶ ಒಡೆಯೋ ಕೆಲಸ ಮಾಡ್ತಿದ್ದಾರೆ. ಮತ್ತೊಂದೆಡೆ ಭಾರತ್ ಜೋಡೋ ಯಾತ್ರೆ ಮಾಡ್ತಿದ್ದಾರೆ ಎಂದು ಬೊಮ್ಮಾಯಿ ಆರೋಪಿಸಿದರು.
ಓದಿ: ಬಿಜೆಪಿ ಜನಸಂಕಲ್ಪ ಯಾತ್ರೆ ಹಾಸ್ಯಾಸ್ಪದ, ನಾಡಿಗೆ ಮಾಡುವ ದ್ರೋಹ : ಸಿದ್ದರಾಮಯ್ಯ