ಹಾವೇರಿ: ಜಿಲ್ಲೆಯ ರಾಣೆಬೆನ್ನೂರು ತಾಲೂಕು ಆಸ್ಪತ್ರೆಯಲ್ಲಿ 1500 ಮಹಿಳೆಯರ ಗರ್ಭಕೋಶ ತೆಗೆಯುವ ಮೂಲಕ ವೈದ್ಯ ಅನ್ಯಾಯ ಮಾಡಿದ್ದಾನೆ. ಆತನ ಮೇಲೆ ಈಗಾಗಲೇ ಹಲವು ಕ್ರಮ ತೆಗೆದುಕೊಂಡಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಿಳಿಸಿದರು.
ಶಿಗ್ಗಾವಿ ತಾಲೂಕಿನ ಮುನವಳ್ಳಿಯಲ್ಲಿ ನೊಂದ ಮಹಿಳೆಯರ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು, ಆ ವೈದ್ಯನ ಮೇಲೆ ಕೆಲ ಕೇಸ್ಗಳು ಇನ್ನೂ ಕೋರ್ಟಿನಲ್ಲಿವೆ. ಈ ಕುರಿತು ಸಮಗ್ರ ವರದಿ ಕೊಡಲು ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ. ಸಮಗ್ರ ವರದಿ ಪಡೆದುಕೊಂಡು ಯಾರು ತಪ್ಪಿತಸ್ಥರಿದ್ದಾರೋ ಅವರಿಗೆ ಶಿಕ್ಷೆ ಮತ್ತು ಮಹಿಳೆಯರಿಗೆ ಸರ್ಕಾರದಿಂದ ಪರಿಹಾರ ನೀಡಲು ಖಂಡಿತವಾಗಿ ಶ್ರಮಿಸಲಾಗುವುದು ಎಂದು ಹೇಳಿದರು.
ವಿಶೇಷ ಆರ್ಥಿಕ ನೆರವಿನ ಪ್ಯಾಕೇಜ್ ಘೋಷಣೆ ಕುರಿತಂತೆ ಮಾತನಾಡುತ್ತಾ, ಕಾನೂನಿನ ಚೌಕಟ್ಟಿನಲ್ಲಿ ಏನು ಸಹಾಯ ಮಾಡಲು ಆಗುತ್ತದೆ, ಅದನ್ನು ಮಾಡುತ್ತೇನೆ ಎಂದರು. ಗರ್ಭಕೋಶ ಶಸ್ತ್ರಚಿಕಿತ್ಸೆಗೆ ಒಳಗಾದ ಮಹಿಳೆಯರ ಸಮಸ್ಯೆ ಆಲಿಸುವ ವೇಳೆ ಸಿಎಂ ಬಸವರಾಜ ಬೊಮ್ಮಾಯಿ ಅವರ ಮುಂದೆ ನೊಂದ ಮಹಿಳೆ ಶಾಂತಮ್ಮ ಕಣ್ಣೀರು ಹಾಕಿದ್ದು ಮನಕಲಕುವಂತಿತ್ತು.
ಇದನ್ನೂ ಓದಿ: ವರನ ಹಳ್ಳಿಗಿಲ್ಲ ಸೂಕ್ತ ರಸ್ತೆ- ಎತ್ತಿನ ಗಾಡಿಯಲ್ಲೇ ಮಂಟಪ ತಲುಪಿದ ವಧು