ರಾಣೆಬೆನ್ನೂರು:ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡಿದ್ದ ಅರಣ್ಯ ಇಲಾಖೆಯ ಜಾಗ ತೆರವು ಕಾರ್ಯಾಚರಣೆ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕು ಖಂಡೇರಯನಹಳ್ಳಿಯಲ್ಲಿ ನಡೆದಿದೆ.
ಗ್ರಾಮದ ಬಳಿ ಇರುವ ಸಿದ್ಧಾರೂಢ ಮಠದ ಸಮೀಪದ ಸರ್ವೆನಂಬರ್ 14 ರಲ್ಲಿ ಜಾಗವನ್ನು ಒತ್ತುವರಿ ಮಾಡಿಕೊಂಡು ಮನೆ ನಿರ್ಮಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ರಾಣೆಬೆನ್ನೂರು ಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಬುಧವಾರ ಮನೆ ಸೇರಿದಂತೆ ಜಾಗವನ್ನು ತೆರವುಗೊಳಿಸಿದರು.
ಆದರೆ ಅರಣ್ಯ ಇಲಾಖೆ ನಮಗೆ ಯಾವುದೇ ನೋಟಿಸ್ ನೀಡಿಲ್ಲ ಏಕಾ ಏಕಿ ತೆರವು ಕಾರ್ಯಾಚರಣೆ ಮಾಡಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಸಿದ್ಧಾರೂಢ ಮಠ ಸಹ ಒತ್ತುವರಿ ಜಾಗದಲ್ಲಿಯೇ ಇದೆ ಮಠಕ್ಕೆ ಹೋಗಲು ರಸ್ತೆ ನಿರ್ಮಿಸಲು ನಮ್ಮನ್ನ ತೆರವು ಮಾಡಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಈ ಸಂಬಂಧ ಸ್ಥಳೀಯರು ಮತ್ತು ಪೊಲೀಸರ ನಡುವೆ ಮಾತಿನ ಚಕಮಿಕಿ ಸಹ ನಡೆದಿದೆ. ಈ ವೇಳೆ ಪೊಲೀಸರು 14 ಜನರನ್ನ ವಶಕ್ಕೆ ಪಡೆದಿದ್ದಾರೆ. ರಾಣೆಬೆನ್ನೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಇದನ್ನೂ ಓದಿ:ಹಾವೇರಿ: ಗೋಲ್ಡ್ ಕಾಯಿನ್ ನೀಡುವುದಾಗಿ ನಂಬಿಸಿ ಹಣ ದೋಚಿದ ಆರೋಪಿಗಳ ಬಂಧನ