ETV Bharat / state

ನೀರು ನಿಂತು ಕೊಳೆತೋಯ್ತು ಮೆಣಸು, ಮಳೆರಾಯನ ಮೇಲೆ ಅನ್ನದಾತನ ಮುನಿಸು - crop loss due to rain

ನಿರಂತರ ಮಳೆಯಾಗಿ ನದಿ ನೀರು ಮೆಣಸಿನಕಾಯಿ ಬೆಳೆದ ಜಮೀನುಗಳಿಗೆ ನುಗ್ಗಿದೆ. ಪರಿಣಾಮ, ಬೆಳೆ ನೀರಲ್ಲಿ ಕೊಳೆತು ಹೋಗಿದ್ದು ಹಾವೇರಿ ರೈತರು ಆತಂಕಗೊಂಡಿದ್ದಾರೆ.

chilly crop loss due to rain in haveri
ಮಳೆಯಿಂದ ಮೆಣಸಿನಕಾಯಿ ಬೆಳೆ ಹಾನಿ
author img

By

Published : Jul 20, 2022, 7:23 AM IST

Updated : Jul 20, 2022, 12:04 PM IST

ಹಾವೇರಿ: ಜಿಲ್ಲೆಯಲ್ಲಿ ವರುಣನ ಅಬ್ಬರವೇನೋ ಕಡಿಮೆಯಾಗಿದೆ. ಆದರೆ ಈವರೆಗೆ ಸುರಿದ ಮಳೆ ಭಾರಿ ಅವಾಂತರವನ್ನೇ ಸೃಷ್ಟಿಸಿಹೋಗಿದೆ. ಮುಂಗಾರು ಅವಧಿಗೂ ಮುನ್ನ ಆರ್ಭಟಿಸಿ ನಮ್ಮನ್ನು ಸಾಲದ ಸುಳಿಯಲ್ಲಿ ಸಿಲುಕಿಸಿತು ಎನ್ನುತ್ತಿದ್ದಾರೆ ರೈತರು.

ಕಳೆದ ವರ್ಷ ಮಳೆ ಬರುವುದು ನಿಧಾನವಾಗಿತ್ತು. ಮಳೆ ಜೋರಾಗಿ ಬಂದು ನೀರು ಜಮೀನಿಗೆ ನುಗ್ಗುವುದರೊಳಗೆ ಎರಡು ಬಾರಿ ಫಸಲು ಪಡೆದಿದ್ದೆವು. ಹಾಕಿದ ಬಂಡವಾಳದ ಜೊತೆಗೆ ಲಾಭವೂ ಕೈ ಸೇರಿತ್ತು. ಈ ವರ್ಷ ಫಸಲು ತೆಗೆದುಕೊಳ್ಳಬೇಕು ಎನ್ನುವಷ್ಟರಲ್ಲಿ ನಿರಂತರ ಮಳೆ ಸುರಿದು ನದಿನೀರು ಮೆಣಸಿನಕಾಯಿ ಬೆಳೆದ ಜಮೀನಿಗೆ ನುಗ್ಗಿ, ಬೆಳೆ ನೀರಲ್ಲಿ ಕೊಳೆತು ಹೋಗಿದೆ ಎಂದು ರೈತರೊಬ್ಬರು ಅಳಲು ತೋಡಿಕೊಂಡರು.

ನದಿನೀರು ಒಮ್ಮೆ ಜಮೀನುಗಳಿಗೆ ನುಗ್ಗಿದರೆ ಬೆಳೆ ಹಾನಿಯಾಗುತ್ತದೆ. ನೀರು ನುಗ್ಗಿದ ಜಮೀನಿನಲ್ಲಿರುವ ಬೆಳೆಗಳನ್ನು ತೆಗೆದು ಹಾಕಿ ಮತ್ತೆ ಬಿತ್ತನೆ ಮಾಡಬೇಕು. ಆದರೆ ಅದಕ್ಕೂ ಮಳೆರಾಯನ ಕೃಪೆ ಬೇಕು. ಈ ವರ್ಷ ಅದೂ ಸಹ ಸಾಧ್ಯವಾಗುವುದಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಇದನ್ನೂ ಓದಿ: ಮೋಡ ಮುಸುಕಿದ ವಾತಾವರಣ: ಲಕ್ಷಾಂತರ ಬಂಡವಾಳ ಮಣ್ಣು ಪಾಲು

ತೋಟಗಾರಿಕಾ ಬೆಳೆಗಳಿಗೂ ಮಳೆಯಿಂದ ಹಾನಿಯಾಗಿದೆ. ಅಧಿಕಾರಿಗಳು ಸರಿಯಾಗಿ ಹಾನಿ ಪ್ರಮಾಣ ಬರೆದು ಸಮರ್ಪಕವಾಗಿ ಪರಿಹಾರ ಸಿಗುವಂತೆ ಮಾಡಬೇಕೆಂದು ರೈತರು ಒತ್ತಾಯಿಸಿದ್ದಾರೆ.

Last Updated : Jul 20, 2022, 12:04 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.