ರಾಣೆಬೆನ್ನೂರು: ಸಂಜೆ ಸುರಿದ ಭಾರಿ ಗಾಳಿ-ಮಳೆಗೆ ಕೊರೊನಾ ತಪಾಸಣೆಗೆ ಹಾಕಿದ ಚೆಕ್ ಪೋಸ್ಟ್ ಕಿತ್ತು ಹೋಗಿ, ಇಬ್ಬರು ಗಾಯಗೊಂಡ ಘಟನೆ ತಾಲೂಕಿನ ಮಾಕನೂರ ಕ್ರಾಸ್ ಬಳಿ ನಡೆದಿದೆ.
ಕೊರೊನಾ ತಪಾಸಣೆಗಾಗಿ ಮಾಕನೂರ ಗ್ರಾಮದ ಕ್ರಾಸ್ ಬಳಿ ಟೆಂಟ್ ಹಾಕಲಾಗಿತ್ತು. ಈ ಟೆಂಟ್ ಒಳಗೆ ಇಂದು ಪೊಲೀಸ್ ಇಲಾಖೆಯ ಮುಖ್ಯಪೇದೆ ಮತ್ತು ಆಶಾ ಕಾರ್ಯಕರ್ತೆ ಕಾರ್ಯನಿರ್ವಹಿಸುತ್ತಿರುವಾಗ ಏಕಾಏಕಿ ಮಳೆ-ಗಾಳಿ ಶುರುವಾಗಿದೆ. ರಕ್ಷಣೆಗಾಗಿ ಟೆಂಟ್ನ ಒಂದು ಭಾಗದಲ್ಲಿ ನಿಂತಿರುವ ಸಮಯದಲ್ಲಿ ಭಾರಿ ಗಾಳಿಯಿಂದ ತಗಡು(ಶೀಟ್)ಮುರಿದು ಪೊಲೀಸ್ ಸಿಬ್ಬಂದಿ ಮೇಲೆ ಮತ್ತು ಆಶಾ ಕಾರ್ಯಕರ್ತೆ ಮೇಲೆ ಬಿದ್ದಿವೆ. ಇದರಿಂದ ಇಬ್ಬರೂ ಗಾಯಗೊಂಡಿದ್ದು, ತಕ್ಷಣ ಸ್ಥಳೀಯರು ಮತ್ತು ಪೊಲೀಸ್ ಸಿಬ್ಬಂದಿ ಇಬ್ಬರನ್ನೂ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕಳುಹಿಸಿದ್ದಾರೆ.
![check post collapsed due to heavy rain and wind](https://etvbharatimages.akamaized.net/etvbharat/prod-images/7046426_jayg.jpg)
ಅಲ್ಲದೆ ಚೆಕ್ ಪೋಸ್ಟ್ ಬಳಿ ತಪಾಸಣೆಗೆ ನಿಲ್ಲಿಸಿದ ಕಾರಿನ ಗಾಜಿಗೆ ಹಾನಿಯಾಗಿದ್ದು, ಸ್ಥಳದಲ್ಲಿದ್ದ ಕುರ್ಚಿಗಳು ಮುರಿದಿವೆ.