ETV Bharat / state

ಸಂವಿಧಾನ ಶಿಲ್ಪಿಯನ್ನೇ ಸೋಲಿಸಿದವರ ಬಗ್ಗೆ ಎಚ್ಚರಿಕೆ ಇರಬೇಕು: ಎ. ನಾರಾಯಣಸ್ವಾಮಿ

ದಲಿತ, ಹಿಂದುಳಿದ ಜನರು ಎನ್ನುವ ಕಾಂಗ್ರೆಸ್ಸಿಗರು ಸಂವಿಧಾನ ರಚನೆ ಮಾಡಿದ್ದ ಡಾ. ಬಿ. ಆರ್​. ಅಂಬೇಡ್ಕರ್​ ಅವರನ್ನೇ ಚುನಾವಣೆಯಲ್ಲಿ ಸೋಲಿಸಿದ್ದರು ಎಂದು ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಹೇಳಿದರು.

central-minister-narayanaswamy-statement-on-congress
ಎ ನಾರಾಯಣಸ್ವಾಮಿ
author img

By

Published : Aug 19, 2021, 5:51 PM IST

ರಾಣೆಬೆನ್ನೂರು: ಸಂವಿಧಾನದ ರಚನೆ ಮಾಡಿದ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದರು. ಅಂತಹವರು ನಮ್ಮ ಬಗ್ಗೆ ಯೋಚನೆ ಮಾಡುತ್ತಿದ್ದಾರೆ ಎಂದರೆ ಸಮಾಜ ಈ ಕುರಿತು ಎಚ್ಚೆತ್ತುಕೊಳ್ಳಬೇಕು ಎಂದು ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಕಾಂಗ್ರೆಸ್​ ವಿರುದ್ಧ ಗುಡುಗಿದರು.

ಸಂವಿಧಾನ ಶಿಲ್ಪಿಯನ್ನೇ ಸೋಲಿಸಿದವರ ಬಗ್ಗೆ ಎಚ್ಚರಿಕೆ ಇರಬೇಕು

ರಾಜ್ಯ ಬಿಜೆಪಿ ವತಿಯಿಂದ ಆಯೋಜಿಸಿರುವ ಜನಾಶಿರ್ವಾದ ಯಾತ್ರೆ ಹಿನ್ನೆಲೆ ನಗರಕ್ಕೆ ಆಗಮಿಸಿದಾಗ ಮಾತನಾಡಿ, ಬಿಜೆಪಿ ಸರ್ಕಾರ ಹಿಂದುಳಿದ, ದಲಿತ ಜನರ ಏಳಿಗೆಗಾಗಿ ದಲಿತನೊಬ್ಬನಿಗೆ ಕೇಂದ್ರದಲ್ಲಿ ಸಚಿವ ಸ್ಥಾನ ನೀಡಿದೆ. ಆದರೆ, ಕಾಂಗ್ರೆಸ್ ಪಕ್ಷ ಮಾತ್ರ ದಲಿತರನ್ನು ಮತ ಬ್ಯಾಂಕಿಗೆ ಮಾತ್ರ ಬಳಸಿಕೊಳ್ಳುತ್ತಿದೆ.

ಅಲ್ಲದೇ ಸಂವಿಧಾನದ ಬಗ್ಗೆ ಮಾತನಾಡುವ ಅವರು, ಸಂವಿಧಾನದ ರಚನೆ ಮಾಡಿದ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದರು. ಅಂತಹವರು ನಮ್ಮ ಬಗ್ಗೆ ಯೋಚನೆ ಮಾಡುತ್ತಿದ್ದಾರೆ ಎಂದರೆ ಸಮಾಜ ಈ ಕುರಿತು ಎಚ್ಚೆತ್ತುಕೊಳ್ಳಬೇಕು ಎಂದರು.

ಸದಾಶಿವ ಆರೋಗ ಜಾರಿ: ರಾಜ್ಯದಲ್ಲಿ ಪ್ರತಿ ಚುನಾವಣೆ ಸಮಯದಲ್ಲಿ ಸದಾಶಿವ ಆಯೋಗ ಜಾರಿ ಮಾಡುತ್ತವೆ ಎಂದು ಪಕ್ಷಗಳು ಹೇಳುತ್ತವೆ. ಆದರೆ, ಈವರೆಗೂ ಕೂಡ ಮಾದಿಗ ಜನಾಂಗಕ್ಕೆ ದೊರೆಯಬೇಕಾದ ಮೀಸಲಾತಿ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸಾಮಾಜಿಕ ಅಂತರ ಮಾಯ: ರಾಣೆಬೆನ್ನೂರು ನಗರಕ್ಕೆ ಕೇಂದ್ರ ಸಚಿವ ನಾರಾಯಣಸ್ವಾಮಿ ಆಗಮಿಸಿದ ಸಮಯದಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರು ಸಾಮಾಜಿಕ ಅಂತರ ಮರೆತು ಸಚಿವರನ್ನು ಸನ್ಮಾನಿಸಲು‌ ಮುಗಿಬಿದ್ದರು. ರಾಜ್ಯ ಸರ್ಕಾರ ಹೊರಡಿಸಿರುವ ಕೋವಿಡ್ ನಿಯಮಗಳನ್ನು ಉಲ್ಲಂಘನೆ ಮಾಡಿದ್ದು, ಕಂಡು ಬಂದಿತ್ತು. ಸಾರ್ವಜನಿಕರಿಗೆ ಸರ್ಕಾರ ಕಠಿಣ ನಿಯಮಗಳನ್ನು ವಿಧಿಸಿದರೆ ರಾಜಕಾರಣಿಗಳಿಗೆ ಕೋವಿಡ್​​ ನಿಯಮಗಳು ಯಾಕೆ ಇಲ್ಲ ಎಂದು ಸಾರ್ವಜನಿಕರ ಪ್ರಶ್ನೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.