ETV Bharat / state

ಮುಂಗಾರು ಮಳೆ ಅಭಾವ: ಕಂಗಾಲದ ಹಾವೇರಿಯ ಎಲೆಕೋಸು ಬೆಳೆಗಾರರು - ಈಟಿವಿ ಭಾರತ ಕರ್ನಾಟಕ

ಮುಂಗಾರು ಮಳೆ ವಿಳಂಬವಾಗಿದ್ದರಿಂದ ಎಲೆಕೋಸು ಇಳುವರಿ ಕುಂಠಿತವಾಗಿದ್ದು, ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಸಿಗದೇ ರೈತರು ನಷ್ಟ ಅನುಭವಿಸುತ್ತಿದ್ದಾರೆ.

cabbage-growers-upset-for-price-down-in-haveri
ಮುಂಗಾರು ಮಳೆ ಅಭಾವ: ಕಂಗಾಲದ ಹಾವೇರಿಯ ಎಲೆಕೋಸು ಬೆಳೆಗಾರರು
author img

By

Published : Jul 15, 2023, 10:53 PM IST

Updated : Jul 15, 2023, 11:04 PM IST

ಹಾವೇರಿಯ ಎಲೆಕೋಸು ಬೆಳೆಗಾರರು

ಹಾವೇರಿ: ಜಿಲ್ಲೆಯ ರೈತರು ಅತ್ಯುತ್ತಮವಾದ ಎಲೆಕೋಸು ಬೆಳೆಯುತ್ತಾರೆ. ಇಲ್ಲಿ ಬೆಳೆಯುವ ಎಲೆಕೋಸಿಗೆ ಮಧ್ಯಪ್ರದೇಶ, ಆಂಧ್ರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಹೆಚ್ಚು ಬೇಡಿಕೆ ಇದ್ದು, ಜಿಲ್ಲೆಯಿಂದ ದೊಡ್ಡ ಪ್ರಮಾಣದಲ್ಲಿ ಎಲೆಕೋಸು ರಫ್ತಾಗುತ್ತದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ನೂರಾರು ರೈತರು ಕೆಲ ವರ್ಷಗಳಿಂದ ಎಲೆಕೋಸು ಬೆಳೆಯುತ್ತಿದ್ದಾರೆ. ಆದರೆ, ಪ್ರತಿವರ್ಷ ಉತ್ತಮ ಆದಾಯಗಳಿಸುತ್ತಿದ್ದ ಎಲೆಕೋಸು ಬೆಳೆಗಾರರು ಈ ವರ್ಷ ನಷ್ಟದ ಹಾದಿಯಲ್ಲಿದ್ದಾರೆ.

ಈ ಬಾರಿ ಮುಂಗಾರು ಮಳೆ ವಿಳಂಬದಿಂದ ಎಲೆಕೋಸು ಫಸಲು ನಿರೀಕ್ಷಿತ ಮಟ್ಟದಲ್ಲಿ ಬಂದಿಲ್ಲಾ. ಮುಂಗಾರು ಮಳೆ ವಿಳಂಬ ಎಲೆಕೋಸು ಬೆಳೆಗಾರರಿಗೆ ಹಲವು ಸಮಸ್ಯೆಗಳನ್ನು ಉಂಟುಮಾಡಿದೆ. ಬೇಸಿಗೆ ಕಾಲದಲ್ಲಿ ನಾಟಿ ಮಾಡಿದ್ದ ಎಲೆಕೋಸು ಬೆಳೆ ಮುಂಗಾರು ಮಳೆಗೆ ಉತ್ತಮವಾಗಿ ಬರುತ್ತಿತ್ತು. ಆದರೆ ಈ ಬಾರಿ ಮುಂಗಾರು ಮಳೆ ವಿಳಂಬವಾಗಿರುವುದರಿಂದ ಇಳುವರಿಯಲ್ಲಿ ಕುಂಠಿತವಾಗಿದೆ. ಪ್ರತಿವರ್ಷ ಎಕರೆಗೆ 25 ರಿಂದ 30 ಟನ್ ಬರುತ್ತಿದ್ದ ಎಸೆಕೋಸು ಈ ವರ್ಷ ಎಕರೆಗೆ 15 ರಿಂದ 20 ಟನ್ ಬಂದಿದೆ.

ಎಸೆಕೋಸು ಗಡ್ಡೆಗಳ ಗಾತ್ರ ಸಹ ಸಣ್ಣದಾಗಿದ್ದು, ವ್ಯಾಪಾರಿಗಳು ಈ ರೀತಿಯ ಎಲೆಕೋಸು ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಅಲ್ಲದೆ ಬಾಯಿಗೆ ಬಂದ ದರದಲ್ಲಿ ಬೆಲೆ ನಿಗಧಿ ಮಾಡುತ್ತಿದ್ದಾರೆ. ಕಳೆದ ವರ್ಷ 8ರಿಂದ 10 ರೂಪಾಯಿಗೆ ಕೆಜಿ ಖರೀದಿಸುತ್ತಿದ್ದ ವರ್ತಕರು ಈ ವರ್ಷ 3 ರೂಪಾಯಿ ನಾಲ್ಕು ರೂಪಾಯಿಗೆ ಕೆಜಿಯಂತೆ ಖರೀದಿಸುತ್ತಿದ್ದಾರೆ. ಕಡಿಮೆ ಗಾತ್ರದ ಎಲೆಕೋಸನ್ನು ಕೆಜಿಗೆ ಒಂದು ರೂಪಾಯಿಯಂತೆ ಖರೀದಿ ಮಾಡುತ್ತಿದ್ದಾರೆ.

ಮಳೆ ವಿಳಂಬವಾಗಿರುವುದರಿಂದ ಎಲೆಕೋಸು ಬೆಳೆಯಲ್ಲಿ ವಿವಿಧ ರೋಗಗಳು ಕಾಣಿಸಿಕೊಂಡಿವೆ ಎನ್ನುತ್ತಾರೆ ರೈತರು. ಬೆಂಕಿರೋಗ, ಜಿಟ್ಟೆರೋಗದಿಂದ ಬೆಳೆಗೆ ಹಾನಿಯಾಗಿದೆ. ಎಕರೆಗೆ 30 ಸಾವಿರ ರೂಪಾಯಿ ಖರ್ಚು ಮಾಡುವ ರೈತರು ಸರಿಯಾದ ಇಳುವರಿ ಬಂದರೆ ಎಕರೆಗೆ ಖರ್ಚು ತಗೆದು 50 ಸಾವಿರಕ್ಕೂ ಅಧಿಕ ಲಾಭ ಗಳಿಸುತ್ತಿದ್ದರು. ಆದರೆ, ಪ್ರಸ್ತುತ ವರ್ಷ ಬೆಳೆಗೆ ಮಾಡಿದ ಖರ್ಚು ಸಹ ಬರುತ್ತಿಲ್ಲ ಎಂದು ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ.

ಈ ಮಧ್ಯೆ ವ್ಯಾಪಾರಿಗಳು ಸಹ ರೈತರ ಅಸಹಾಯಕತೆ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ವ್ಯಾಪಾರಿಗಳು ಖರೀದಿಸದೇ ಬಿಟ್ಟು ಹೋದ ಎಲೆಕೋಸನ್ನು ರೈತರು ಹೊಲದಲ್ಲಿ ಗೊಬ್ಬರ ಮಾಡುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಲಾಭಗಳಿಸುತ್ತಿದ್ದ ಎಲೆಕೋಸು ಬೆಳೆಗಾರರು ಈ ವರ್ಷ ಮುಂಗಾರು ವಿಳಂಬದಿಂದ ನಷ್ಟ ಅನುಭವಿಸುತ್ತಿದ್ದಾರೆ.

ರೈತ ರಾಘವೇಂದ್ರ ಕೋರಿ ಶೆಟ್ಟರ್ ಮಾತನಾಡಿ, ನಾವು ಪ್ರತಿ ವರ್ಷ ಎಲೆಕೋಸು ಬೆಳೆಯುತ್ತ ಇದ್ದೆವು. ಈ ವರ್ಷ ಮುಂಗಾರು ಮಳೆ ಬಾರದೇ ಇಳುವರಿ ಕಡಿಮೆ ಬರುತ್ತಿದೆ. ಬೆಳೆ ಬಂದರೂ ಎಲೆಕೋಸಿನ ಗಾತ್ರ ಕಡಿಮೆಯಾಗಿದೆ. ಹಿಂದೆ ಮುಂಗಾರು ಮಳೆ ಚೆನ್ನಾಗಿ ಆಗಿದ್ದರಿಂದ ಎಕರೆಗೆ 2ರಿಂದ 3ಲಕ್ಷ ಲಾಭ ಮಾಡಿಕೊಳ್ಳುತ್ತಿದ್ದೆವು. ಆದರೆ ಈ ಬಾರಿ ಮುಂಗಾರು ವಿಳಂಬವಾಗಿರುವುದರಿಂದ ನಮಗೆ ಹೆಚ್ಚು ಖರ್ಚು ಬರುತ್ತಿದೆ. ಇದರಿಂದ ಎಲೆಕೋಸು ಬೆಳೆದ ರೈತರಿಗೆ ತೊಂದರೆಯಾಗಿದೆ ಎಂದು ಅಳಲು ತೋಡಿಕೊಂಡರು.

ಇದನ್ನೂ ಓದಿ: ತರಕಾರಿಗಳ ಬೆಲೆ ಏರಿಕೆ ಎಫೆಕ್ಟ್: ಅಂಗನವಾಡಿ ಕೇಂದ್ರಗಳಿಗೆ ಎದುರಾಗಿದೆ ಸಂಕಷ್ಟ..

Last Updated : Jul 15, 2023, 11:04 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.