ರಾಣೆಬೆನ್ನೂರ: ಸ್ಮಶಾನಕ್ಕೆ ಹೋಗಲು ರಸ್ತೆ ನಿರ್ಮಿಸಿಕೊಡುವಂತೆ ಹೋರಾಟ ಮಾಡುತ್ತಿರುವ ತಾಲೂಕಿನ ಹುಲ್ಲತ್ತಿ ಗ್ರಾಮಕ್ಕೆ ಎಸಿ ದಿಲೀಶ್ ಸಶಿ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ರಾಣೆಬೆನ್ನೂರ ತಾಲೂಕಿನ ಹುಲ್ಲತ್ತಿ ಗ್ರಾಮದಲ್ಲಿ ಸ್ಮಶಾನಕ್ಕೆ ತೆರಳಲು ರಸ್ತೆ ನಿರ್ಮಿಸುವಂತೆ ಕಳೆದು 5 ದಶಕಗಳಿಂದ ಹೋರಾಟ ನಡೆಯುತ್ತಿದೆ. ಇದರ ಫಲವಾಗಿ ಜಿಲ್ಲಾಡಳಿತ ಸಮಾಜಕಲ್ಯಾಣ ಇಲಾಖೆ ಮೂಲಕ ರಸ್ತೆ ನಿರ್ಮಾಣ ಮಾಡಲು ಹಣ ಮಂಜೂರು ಕೂಡ ಮಾಡಲಾಗಿದೆ. ಆದರೆ, ಇಲ್ಲಿನ ರೈತರು ಮಾತ್ರ ರಸ್ತೆಗೆ ಭೂಮಿ ನೀಡಲು ಹಿಂದೇಟು ಹಾಕುತ್ತಿದ್ದು ಕಾಮಗಾರಿ ವಿಳಂಬವಾಗಿತ್ತು. ಅದಕ್ಕಾಗಿ ಸಮಸ್ಯೆಯಾಗಿದೆ ಎಂದು ಎಸಿ ದಿಲೀಶ್ ಸಶಿ ವಿವರಿಸಿದರು.
ಹುಲ್ಲತ್ತಿ ಗ್ರಾಮದ ಸ್ಮಶಾನ ರಸ್ತೆಗೆ ಸಂಬಂಧಪಟ್ಟಂತೆ ಜಿಲ್ಲಾಡಳಿತ ಗಂಭೀರ ಪ್ರಕರಣ ಎಂದು ತೆಗೆದುಕೊಂಡಿದ್ದು, ಮುಂದಿನ ದಿನಗಳಲ್ಲಿ ರಸ್ತೆ ನಿರ್ಮಾಣ ಮಾಡಲಾಗುವುದು ಎಂದು ಅಧಿಕಾರಿಗಳು ಗ್ರಾಮದ ಜನರಿಗೆ ಮನವರಿಕೆ ಮಾಡಿದರು.
ತಹಶೀಲ್ದಾರ್ ಬಸನಗೌಡ ಕೊಟೂರು, ಸಮಾಜ ಕಲ್ಯಾಣ ಅಧಿಕಾರಿ ರೇಷ್ಮಾಬಾನು ಕೌಶರ, ರೈತ ಮುಖಂಡರಾದ ರವೀಂದ್ರಗೌಡ ಪಾಟೀಲ, ಜಗದೀಶ ಕೆರೊಡಿ, ಗೋವಿಂದ ಲಮಾಣಿ ಇದ್ದರು.