ಹಾವೇರಿ: ಜಿಲ್ಲೆಯಾದ್ಯಂತ ಮಳೆ ಅಬ್ಬರ ಕಡಿಮೆಯಾಗಿದ್ದು ವರದಾ, ತುಂಗಭದ್ರಾ, ಧರ್ಮಾ, ಕುಮುದ್ವತಿ ನದಿಗಳಲ್ಲಿ ನೀರಿನ ಪ್ರಮಾಣವೂ ತಗ್ಗುತ್ತಿದೆ. ಹೀಗಾಗಿ ಸೇತುವೆಗಳು ಜನ, ವಾಹನ ಸಂಚಾರಕ್ಕೆ ಮುಕ್ತವಾಗುತ್ತಿವೆ. ರಟ್ಟಿಹಳ್ಳಿ ತಾಲೂಕಿನ ಯಲಿವಾಳ-ಚಪ್ಪರದಹಳ್ಳಿ ಸೇತುವೆ ಮೇಲಿನ ನೀರು ಇಳಿದಿದ್ದು, ಜನರ ಓಡಾಟ ಶುರುವಾಗಿದೆ. ಸೇತುವೆ ಮೇಲೆ ಕುಮುದ್ವತಿ ನದಿ ನೀರು ಭರಪೂರ ಹರಿಯುತ್ತಿದ್ದುದರಿಂದ ಸಂಚಾರ ಬಂದ್ ಆಗಿತ್ತು. ಸವಣೂರು ತಾಲೂಕಿನ ಕಲಕೋಟಿ-ಕರ್ಜಗಿ ಸೇತುವೆ ಮೇಲಿನ ನೀರು ಕೂಡಾ ಕಡಿಮೆಯಾಗಿದ್ದು ಸಂಚಾರಕ್ಕೆ ತೆರೆದುಕೊಂಡಿದೆ.
ಇದನ್ನೂ ಓದಿ: ಶಿಡ್ಲಾಪುರ ಕೆರೆ ಭರ್ತಿ: ಜಮೀನಿಗೆ ತೆರಳಲು ರೈತರ ಹರಸಾಹಸ