ETV Bharat / state

ಲೋಕಸಭೆ ಚುನಾವಣೆಯಲ್ಲಿ ಜಯಭೇರಿ ಬಾರಿಸುವವರೆಗೆ ವಿಶ್ರಮಿಸುವುದಿಲ್ಲ: ಬಸವರಾಜ ಬೊಮ್ಮಾಯಿ

ವಿಧಾನಸಭೆ ಚುನಾವಣೆ ಫಲಿತಾಂಶದ ನಂತರ ನಾವು ಸುಮ್ಮನೆ ಕುಳಿತಿಲ್ಲ. ಲೋಕಸಭೆ ಚುನಾವಣೆಯಲ್ಲಿ ಜಯಭೇರಿ ಬಾರಿಸುವವರೆಗೆ ವಿಶ್ರಮಿಸುವದಿಲ್ಲ ಎಂದು ಮಾಜಿ ಸಿಎಂ ಬೊಮ್ಮಾಯಿ ಹೇಳಿದ್ದಾರೆ.

ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ
author img

By

Published : May 25, 2023, 8:17 PM IST

ಹಾವೇರಿ: ಬರುವ ದಿನಗಳಲ್ಲಿ ರಾಜಕಾರಣ ತೀವ್ರಗತಿಯಲ್ಲಿ ಬದಲಾವಣಿಯಾಗುತ್ತೆ. ಕೇವಲ ನಾಲ್ಕೈದು ತಿಂಗಳಲ್ಲಿ ರಾಜ್ಯ ರಾಜಕೀಯ ಪರಿಸ್ಥಿತಿ ಸಂಪೂರ್ಣ ಬದಲಾಗಲಿದೆ ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ. ಶಿಗ್ಗಾಂವಿಯಲ್ಲಿ ಮಾತನಾಡಿದ ಅವರು, ಈ ಸರ್ಕಾರ ಹೋಗುತ್ತಿರುವ ದಾರಿ ನೋಡಿದಾಗ ಸೇಡಿನ ರಾಜಕಾರಣ ಶುರು ಮಾಡಿದ್ದಾರೆ. ನಮ್ಮ ನಾಯಕರ ಮೇಲೆ ಕೇಸ್ ಹಾಕುವುದು ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ಆರಂಭಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ನಮ್ಮ ಕಾರ್ಯಕರ್ತರು, ನಾವು ದುಡಿದು ರೊಟ್ಟಿ ತಿಂದು ರಾಜಕಾರಣ ಮಾಡುವವರು. ನಾವು ರೊಟ್ಟಿಗಾಗಿ ರಾಜಕಾರಣ ಮಾಡುವುದಿಲ್ಲ. ಒಂದು ಚುನಾವಣೆ ಒಂದು ರಾಜ್ಯದ, ಒಂದು ಪಕ್ಷದ ಭವಿಷ್ಯ ಬರೆಯಲು ಸಾಧ್ಯವಿಲ್ಲ. ರಾಮಕೃಷ್ಣ ಹೆಗಡೆ ಲೋಕಸಭೆ ಚುನಾವಣೆಯಲ್ಲಿ ಸೋತ ಮೇಲೆ ರಾಜೀನಾಮೆ ನೀಡಿ ವಿಧಾನಸಭೆ ಚುನಾವಣಿಗೆ ಹೋದಾಗ 136 ಸ್ಥಾನ ಗೆದ್ದು ಅಧಿಕಾರಕ್ಕೆ ಬಂದರು. 2014 ರಲ್ಲಿ ಬಿಜೆಪಿಯಿಂದ 19 ಸಂಸದರು ಆಯ್ಕೆಯಾಗಿದ್ದರು. 2019 ರಲ್ಲಿ 25 ಸ್ಥಾನ ಗೆದ್ದಿದ್ದೆವು. ಈಗ ಮತ್ತೆ 2024 ರ ಲೋಕಸಭೆ ಚುನಾವಣೆಯಲ್ಲಿ 25 ಸ್ಥಾನ ಬಿಜೆಪಿ ಗೆಲ್ಲಲಿದೆ ಎಂದು ಬೊಮ್ಮಾಯಿ ತಿಳಿಸಿದರು.

ಈ ಚುನಾವಣೆ ಫಲಿತಾಂಶದ ನಂತರ ನಾವು ಸುಮ್ಮನೆ ಕುಳಿತಿಲ್ಲ. ಲೋಕಸಭಾ ಚುನಾವಣೆಯಲ್ಲಿ ಜಯಭೇರಿ ಬಾರಿಸುವವರೆಗೆ ವಿಶ್ರಮಿಸುವುದಿಲ್ಲ ಎಂದು ಬೊಮ್ಮಾಯಿ ತಿಳಿಸಿದರು. ನಾನು ರಾಜಕಾರಣವನ್ನ ತೀರಾ ಹತ್ತೀರದಿಂದ ನೋಡಿದ್ದೇನೆ. ಐದು ಜನ ಸಿಎಂ ಜೊತೆ ಕೆಲಸ ಮಾಡಿದ ನಂತರ ನಾನು ಸಿಎಂ ಆಗಿದ್ದೇನೆ. ಎಲ್ಲೆಲ್ಲಿ ಏನೇನು ನಡೆಯುತ್ತೆ ರಾಜಕಾರಣ ಹೇಗೆ ನಡೆಯುತ್ತೆ ಜನವಿರೋಧ ರಾಜಕಾರಣಕ್ಕೆ ಯಾವ ರೀತಿ ಪಟ್ಟು ಹಾಕಿ ಮಣಿಸಬೇಕು ಎನ್ನುವುದು ನನಗೆ ಗೊತ್ತಿದೆ ಎಂದು ಆಡಳಿತ ಪಕ್ಷಕ್ಕೆ ಟಾಂಗ್​ ಕೊಟ್ಟರು.

ಬಸವರಾಜ್ ಬೊಮ್ಮಾಯಿ ಮಾಜಿ ಸಿಎಂ ಆಗಿದ್ದಾರೆ ಅಂತ ಇನ್ನೇನು ಕೆಳಹಂತಕ್ಕೆ ಬರುವದಿಲ್ಲಾ ಎಂದು ತಿಳಿದುಕೊಳ್ಳಬೇಡಿ. ನನ್ನ ಸುಲಭವಾಗಿ ತಿಳಿದುಕೊಂಡರೆ ಅದು ಭ್ರಮೆ. ನಾನು ನನ್ನ ಜನರಿಗೋಸ್ಕರ ಯಾವ ಮಟ್ಟಕ್ಕೂ ಬರಲು ಸಿದ್ದನಿದ್ದೇನೆ. ಯಾವ ಹಂತಕ್ಕೂ ಬರಲು ಸಿದ್ದನಿದ್ದೇನೆ ಎಂದು ಬೊಮ್ಮಾಯಿ ತಿಳಿಸಿದರು. ಬೇಕಾದರೆ ಪರೀಕ್ಷೆ ಮಾಡಿ ನೋಡಿ ಅಭಿವೃದ್ದಿಯ ಹಂತದಲ್ಲಿ ನೀವು ಬನ್ನಿ ಸ್ವಾಗತ ಆದರೆ ಅಡ್ಡಿಪಡಿಸಲು ಬಂದರೆ ಯಾರ ಮಾತು ಕೇಳುವದಿಲ್ಲ.

ಸದಾ ನಿಮ್ಮ ಜತೆಯೇ ಇರುತ್ತೇನೆ: ರಾಜಕಾರಣ ಮಾಡಿ ಅದು ಜನರ ರಾಜಕಾರಣ ಜನ ಮೆಚ್ಚುವ ರಾಜಕಾರಣ ಮಾಡಿ ಅದನ್ನ ಬಿಟ್ಟು ಅಡ್ಡಗಾಲು ಹಾಕುವ ರಾಜಕಾರಣ ಮಾಡಬೇಡಿ ಇದು ಒಳ್ಳೆಯದಲ್ಲಾ ಎಂದು ಬೊಮ್ಮಾಯಿ ತಿಳಿಸಿದರು. ಎರಡು ವರ್ಷ ನಿಮ್ಮ ಜೊತೆ ಸಮಯ ಕಳೆಯಲಾಗಿಲ್ಲದಿರುವುದಕ್ಕೆ ದೇವರು ನನಗೆ ಈ ಸ್ಥಾನ ನೀಡಿದ್ದಾನೆ. ಇನ್ಮುಂದೆ ನಿಮ್ಮ ಜೊತೆ ಸದಾ ಇರುವುದಾಗಿ ಬೊಮ್ಮಾಯಿ ತಿಳಿಸಿದರು. ಕೆಲವೊಮ್ಮೆ ಮತದಾರ ನಾವು ಏನು ಮಾಡಿದ್ದೇವೆ ಏನು ಕೊಟ್ಟಿದ್ದೇವೆ ಎನ್ನುವ ಬದಲು ಏನು ಕೊಡುತ್ತಾರೆ ಎಂದು ನಿರೀಕ್ಷೆ ಮಾಡುತ್ತಾರೆ ಎಂದು ಬಿಜೆಪಿ ಸೋಲಿನ ಬಗ್ಗೆ ಹೇಳಿದರು.

ಕಾಂಗ್ರೆಸ್​ನವರು ಮೊದಲ ಸಚಿವ ಸಂಪುಟದ ಸಭೆ ನಡೆಸಿ ಗ್ಯಾರಂಟಿ ಕಾರ್ಡ್ ಆದೇಶ ಮಾಡಿ ಮನೆ ಮನೆಗೆ ಮುಟ್ಟಿಸುತ್ತೇವೆ ಎಂದಿದ್ದರು. ಉಚಿತ ಅಕ್ಕಿ200 ಯುನಿಟ್ ಕರೆಂಟ್ ನೀಡುತ್ತೇವೆ ಮನೆಯ ಯಜಮಾನಿಗೆ ಎರಡು ಸಾವಿರ ನೀಡುತ್ತೇವೆ ಎಂದಿದ್ದರು. ಮೊದಲ ಸಚಿವ ಸಂಪುಟದ ನಂತರ ಈ ಕುರಿತಂತೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರ ಹೇಳಲು ತಡಕಾಡಿದರು. ಅಷ್ಟು ಸಾಲ ಮಾಡಿದರು ಇಷ್ಟು ಸಾಲ ಮಾಡಿದ್ರು ಎಂದು ಮಾಜಿ ಸಿಎಂಗಳ ಮೇಲೆ ಆರೋಪ ಮಾಡಿದರು.

ಬೊಮ್ಮಾಯಿ ಕಾದು ನೋಡಿ ಎಂದಿದ್ದೇಕೆ?: ಅವರ ಗ್ಯಾರಂಟಿ ಯೋಜನೆಗಳ ಮಾನದಂಡಗಳ ಬಗ್ಗೆ ಕಾದು ನೋಡಿ ಅಂದ್ರು. ಮತದಾನ ಮುನ್ನ ನೀವೆ ತಂದೆ ತಾಯಿ ಎಂದ ಕಾಂಗ್ರೆಸ್‌ ನಾಯಕರಿಗೆ ಮತದಾರ ಈಗ ದಾರಿಹೋಕನಾಗಿದ್ದೇನೆ. ಕಾಂಗ್ರೆಸ್ ನಿಜವಾದ ಬಣ್ಣ ಈಗ ಬಯಲಾಗುತ್ತಿದೆ. ಅವರಿಗೆ ಗ್ಯಾರಂಟಿ ಕಾರ್ಡ್ ನೀಡಲು ಪುರುಸೋತ್ತಿಲ್ಲ. ಮೊದಲು ಸಿಎಂ ಡಿಸಿಎಂ ಈಗ ಸಚಿವ ಸಂಪುಟ ವಿಸ್ತರಣೆಯಲ್ಲಿ ಬ್ಯುಸಿಯಾಗಿದ್ದಾರೆ ಎಂದು ಲೇವಡಿ ಮಾಡಿದರು.

ಇದನ್ನೂ ಓದಿ: ಬಿಜೆಪಿ ಶಾಸಕ ಹರೀಶ್ ಪೂಂಜಾ ಕ್ಷಮೆಯಾಚಿಸದಿದ್ದರೆ ಮಾನನಷ್ಟ ಮೊಕದ್ದಮೆ : ವಿಧಾನಪರಿಷತ್ ಸದಸ್ಯ ಹರೀಶ್ ಕುಮಾರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.