ETV Bharat / state

ಹಾವೇರಿ ರಕ್ತ ಭಂಡಾರದಿಂದ ರಕ್ತದಾನದ ಜಾಗೃತಿ.. ಹೆಚ್ಚಾದ ರಕ್ತದಾನಿಗಳ ಸಂಖ್ಯೆ.. ವಾರ್ಷಿಕ 7 ಸಾವಿರ ಯುನಿಟ್ ಬ್ಲಡ್​ ಸಂಗ್ರಹಣೆ

author img

By

Published : Jul 9, 2023, 5:47 PM IST

Updated : Jul 11, 2023, 10:36 AM IST

ಹಾವೇರಿ ಜಿಲ್ಲೆಯಲ್ಲಿ ರಕ್ತದ ಅವಶ್ಯಕತೆ ಇದ್ದಾಗ ದೂರದ ಹುಬ್ಬಳ್ಳಿ, ದಾವಣಗೆರೆ ನಗರಗಳಿಗೆ ತೆರಳಿ ತರಬೇಕಿತ್ತು. ಆದರೆ ಜಿಲ್ಲಾಸ್ಪತ್ರೆಯಲ್ಲಿ ರಕ್ತಭಂಡಾರದ ಶ್ರಮದಿಂದಾಗಿ ಆ ಸಮಸ್ಯೆ ಇಲ್ಲದಂತಾಗಿದೆ. ಸರ್ಕಾರದ ಮಾನದಂಡದಂತೆ ಜಿಲ್ಲೆಯ ಜನಸಂಖ್ಯೆ 19 ಲಕ್ಷ ಇದ್ದು, 19 ಸಾವಿರ ಯುನಿಟ್ ರಕ್ತ ಸಂಗ್ರಹಣೆಗೆ ಹಾವೇರಿ ಜಿಲ್ಲಾ ರಕ್ತ ಭಂಡಾರ ಘಟಕ ಜನರಲ್ಲಿ ಹೆಚ್ಚು ಹೆಚ್ಚು ಜಾಗೃತಿ ಮೂಡಿಸುತ್ತಿದೆ.

Blood Bank at Haveri District Hospital
ಹಾವೇರಿ ಜಿಲ್ಲಾಸ್ಪತ್ರೆಯಲ್ಲಿರುವ ರಕ್ತಭಂಡಾರ
ಹಾವೇರಿ ರಕ್ತ ಭಂಡಾರದಿಂದ ರಕ್ತದಾನದ ಜಾಗೃತಿ.. ಹೆಚ್ಚಾದ ರಕ್ತದಾನಿಗಳ ಸಂಖ್ಯೆ.. ವಾರ್ಷಿಕ 7 ಸಾವಿರ ಯುನಿಟ್ ಬ್ಲಡ್​ ಸಂಗ್ರಹಣೆ

ಹಾವೇರಿ: ಜಿಲ್ಲಾಸ್ಪತ್ರೆಯಲ್ಲಿ 2006 ರಿಂದ ಆರಂಭವಾದ ರಕ್ತಭಂಡಾರ 2018ರಲ್ಲಿ ರಕ್ತವಿದಳನಾ ಕೇಂದ್ರವಾಗಿ ಮಾರ್ಪಟ್ಟಿದೆ. ಆರಂಭದಲ್ಲಿ ವಾರ್ಷಿಕ 1500 ಯುನಿಟ್ ರಕ್ತ ಸಂಗ್ರಹಿಸುತ್ತಿದ್ದ ರಕ್ತ ಭಂಡಾರ ಇದೀಗ ವಾರ್ಷಿಕ 7 ಸಾವಿರ ಯುನಿಟ್ ರಕ್ತ ಸಂಗ್ರಹಿಸಿ, ಹಲವಾರು ಜೀವ ರಕ್ಷಣೆಗೆ ಸಹಾಯಕವಾಗಿ ಕೆಲಸ ಮಾಡುತ್ತಿದೆ.

ಜಿಲ್ಲೆಯ ಜನರಲ್ಲಿ ರಕ್ತದಾನದ ಜಾಗೃತಿ ಮೂಡಿಸುವ ಮೂಲಕ ಮೂಢನಂಬಿಕೆ ಅವೈಜ್ಞಾನಿಕ ನಂಬಿಕೆಗಳನ್ನು ರಕ್ತಭಂಡಾರ ತೊಡೆದು ಹಾಕುತ್ತಿದೆ. ಇದರ ಪರಿಣಾಮ ವರ್ಷದಿಂದ ವರ್ಷಕ್ಕೆ ರಕ್ತದಾನ ಮಾಡುವವರ ಸಂಖ್ಯೆ ಅಧಿಕವಾಗುತ್ತಿದೆ. ಇದರ ಜೊತೆಗೆ ರಕ್ತದ ಬೇಡಿಕೆ ಸಹ ಹೆಚ್ಚಾಗುತ್ತಿದೆ. ಹಾವೇರಿ ರಕ್ತಭಂಡಾರ ಜಿಲ್ಲೆಯಲ್ಲಿ ಜನರಿಗೆ ವಾಟ್ಸಪ್, ಇನ್​ಸ್ಟಾಗ್ರಾಮ್, ಫೇಸ್​ಬುಕ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳ ಮೂಲಕ ರಕ್ತದಾನದ ಮಹತ್ವ ಸಾರುತ್ತಿದೆ.

ರಕ್ತದಾನಿಗಳ ತವರೂರು ಎಂಬ ಖ್ಯಾತಿ: ಜಿಲ್ಲೆಯ ಹಾನಗಲ್ ತಾಲೂಕಿನ ಅಕ್ಕಿಆಲೂರಿನಲ್ಲಿ ರಕ್ತದಾನಪ್ರೇಮಿ ಕರಬಸಪ್ಪ ಗೊಂದಿ ಅವರು ಬ್ಲಡ್ ಆರ್ಮಿ ಸಂಘ ರಚಿಸಿಕೊಂಡಿದ್ದು, ಇದರ ಪರಿಣಾಮ ಅಕ್ಕಿಆಲೂರು ವಿಶ್ವದಲ್ಲಿಯೇ ರಕ್ತ ಸೈನಿಕರ ತವರೂರು ಎಂಬ ಖ್ಯಾತಿಗೆ ಪಾತ್ರವಾಗಿದೆ. ಹಾವೇರಿ ಜಿಲ್ಲಾಸ್ಪತ್ರೆ ಜೊತೆಗೆ ಇದೀಗ ಜಿಲ್ಲಾಕೇಂದ್ರದಲ್ಲಿ ವೈದ್ಯಕೀಯ ಕಾಲೇಜು ಕಾರ್ಯಾರಂಭ ಮಾಡಿದೆ. ಪರಿಣಾಮ ರಕ್ತಭಂಡಾರದ ಕಾರ್ಯ ಇನ್ನೂ ಅತ್ಯಾಧುನಿಕವಾಗಬೇಕಿದೆ. ಈಗ ಇರುವ ಆಧುನಿಕ ಸಲಕರಣಿಗಳ ಜೊತೆ ಇನ್ನಷ್ಟು ಅತ್ಯಾಧುನಿಕ ಸಲಕರಣಿ ಮತ್ತು ವಾಹನ ನೀಡಿದರೆ ರಕ್ತ ಸಂಗ್ರಹಕ್ಕೆ ಹೆಚ್ಚು ಅನುಕೂಲವಾಗುತ್ತೆ ಎನ್ನುತ್ತಾರೆ ಇಲ್ಲಿಯ ರಕ್ತಭಂಡಾರದ ತಾಂತ್ರಿಕ ಅಧಿಕಾರಿ ಬಸವರಾಜ್ ಕಮತದ.

ಮೊದ ಮೊದಲು ಹಾವೇರಿ ಜಿಲ್ಲೆಯಲ್ಲಿ ರಕ್ತದ ಅವಶ್ಯಕತೆ ಇದ್ದಾಗ ದೂರದ ಹುಬ್ಬಳ್ಳಿ, ದಾವಣಗೆರೆ ನಗರಗಳಿಗೆ ತೆರಳಬೇಕಿತ್ತು. ಆದರೆ ಜಿಲ್ಲಾಸ್ಪತ್ರೆಯಲ್ಲಿ ರಕ್ತಭಂಡಾರದ ಶ್ರಮದಿಂದಾಗಿ ಆ ಸಮಸ್ಯೆ ಇಲ್ಲದಂತೆ ಆಗಿದೆ. ಜೊತೆಗೆ ರಕ್ತಸಂಗ್ರಹ ಅಧಿಕವಾಗಿ ರಕ್ತದ ಅವಧಿ ಅಲ್ಪಾವಧಿಯಾಗಿದ್ದರೆ ಹಾವೇರಿ ರಕ್ತಭಂಡಾರದಿಂದ ಹುಬ್ಬಳ್ಳಿಯ ಕಿಮ್ಸ್​ ರಕ್ತದಾನ ಹೆಚ್ಚುವರಿ ರಕ್ತ ನೀಡಿರುವ ಉದಾಹರಣೆಗಳು ಸಹ ಇವೆ.

ಸರ್ಕಾರದ ಮಾನದಂಡಗಳ ಪ್ರಕಾರ ಜಿಲ್ಲೆಯ ಜನಸಂಖ್ಯೆ 19 ಲಕ್ಷ ಇದ್ದರೆ, ಜಿಲ್ಲೆಯಲ್ಲಿ 19 ಸಾವಿರ ಯುನಿಟ್ ರಕ್ತ ಸಂಗ್ರಹಿಸುವ ಅಗತ್ಯತೆ ಇದೆ. ಜಿಲ್ಲಾಸ್ಪತ್ರೆ ಸೇರಿದಂತೆ ಜಿಲ್ಲೆಯ ಖಾಸಗಿ ರಕ್ತಭಂಡಾರಗಳ ಸದ್ಯ ವರ್ಷಕ್ಕೆ 12 ಸಾವಿರ ಯುನಿಟ್ ರಕ್ತಸಂಗ್ರಹಿಸುತ್ತಿವೆ. 19 ಸಾವಿರ ಯುನಿಟ್ ಗುರಿಯಾಗಿಸಿಕೊಂಡಿರುವ ಹಾವೇರಿ ಜಿಲ್ಲಾ ರಕ್ತಭಂಡಾರ, ಜನರಲ್ಲಿ ಹೆಚ್ಚು ಹೆಚ್ಚು ಜಾಗೃತಿ ಮೂಡಿಸುತ್ತಿದೆ. 2021 ರಲ್ಲಿ ರಾಜ್ಯ ಸರ್ಕಾರದಿಂದ ಅತಿಹೆಚ್ಚು ರಕ್ತದಾನ ಸಂಗ್ರಹಿಸಿದ ರಕ್ತಭಂಡಾರ ಎಂಬ ಪ್ರಶಸ್ತಿಗೆ ಸಹ ಪಾತ್ರವಾಗಿದೆ.

ರಕ್ತಭಂಡಾರದ ಆರೋಗ್ಯಾಧಿಕಾರಿ ಡಾ. ಬಸವರಾಜ್ ತಳವಾರ ಅವರು ಈಟಿವಿ ಭಾರತದೊಂದಿಗೆ ಮಾತನಾಡಿ, ನಾವು ಜೀವಂತವಿದ್ದಾಗ ನೋಡಬಹುದಾದ ಮಹತ್ವದ ಕಾಯಕವೆಂದರೆ, ಅದು ದಾನ ರಕ್ತದಾನ ಆಗಿದೆ. ಜೀವ ಹೋದಮೇಲೆ ನೇತ್ರದಾನ ಅಂಗಾಂಗ ದಾನ ಮಾಡಬೇಕು. ಪ್ರಸ್ತುತ ದಾನಿಗಳಿಂದ ರಕ್ತ ಸಂಗ್ರಹದ ಕಾರ್ಯಕ್ಕೆ ಇನ್ನಷ್ಟು ಯಂತ್ರೋಪಕರಣಗಳು ವಾಹನದ ಅವಶ್ಯವಿದೆ ಎಂದು ತಿಳಿಸಿದ್ದಾರೆ.

ಸರ್ಕಾರ ರಕ್ತಭಂಡಾರಕ್ಕೆ ಆಧುನಿಕ ಯಂತ್ರೋಪಕರಣ ಮತ್ತು ವಾಹನಗಳನ್ನು ಪೂರೈಸಿದೆ. ಆದರೆ ಹಾವೇರಿ ರಕ್ತ ಭಂಡಾರವನ್ನು ರಾಜ್ಯದಲ್ಲಿ ಮಾದರಿ ರಕ್ತಭಂಡಾರ ಮಾಡಬೇಕು. ಆದಕ್ಕೆ ಬೇಕಾಗುವ ಸಹಾಯ, ಆಧುನಿಕ ಸವಲತ್ತು ಇನ್ನಷ್ಟು ಒದಗಿಸಬೇಕು ಎಂಬ ಇಂಗಿತವನ್ನು ಆರೋಗ್ಯಾಧಿಕಾರಿ ವ್ಯಕ್ತಪಡಿಸಿದ್ದಾರೆ.

ಇದನ್ನೂಓದಿ:ರಾಜ್ಯದ ಅಮರನಾಥ ಯಾತ್ರಿಕರು ಸುರಕ್ಷಿತವಾಗಿದ್ದಾರೆ, ಭಯ ಪಡುವ ಅವಶ್ಯಕತೆ ಇಲ್ಲ: ಹೆಚ್ ಕೆ ಪಾಟೀಲ್

Last Updated : Jul 11, 2023, 10:36 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.