ಹಾವೇರಿ : ಬಿಜೆಪಿ ನಾಯಕರು ಇಷ್ಟೆಲ್ಲಾ ಬಜರಂಗದಳ ನಿಷೇಧ ವಿಚಾರವಾಗಿ ಹೋರಾಟ ಮಾಡುತ್ತಿದ್ದಾರೆ. ಆದರೆ ಬಜರಂಗದಳ ಸ್ಥಾಪಿಸಿದ ಪ್ರಮೋದ್ ಮುತಾಲಿಕ್‌ಗೆ ಸ್ಪರ್ಧಿಸಲು ಟಿಕೆಟ್ ನೀಡಿಲ್ಲ. ಇದರಿಂದ ನೊಂದ ಪ್ರಮೋದ್ ಮುತಾಲಿಕ್ ಕಾರ್ಕಳ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ್ ಚಂದ್ರಶೇಖರ್ ಮುದಕಣ್ಣವರ್ ಹೇಳಿದರು.
ಹಾವೇರಿಯಲ್ಲಿ ಮಾತನಾಡಿದ ಅವರು, ಬಿಜೆಪಿಯರಿಗೆ ಬಜರಂಗದಳದ ಬಗ್ಗೆ ಪ್ರೀತಿ ಇದ್ದರೆ ಪ್ರಮೋದ್ ಮುತಾಲಿಕ್‌ಗೆ ಸಪೋರ್ಟ್ ಮಾಡಿ ಅವರನ್ನು ಆರಿಸಿ ತರಲಿ. ಅತಿವೃಷ್ಠಿಯಾದಾಗ, ಕೊರೊನಾ ವ್ಯಾಪಿಸಿದಾಗ ಜನ ಭಯದಿಂದ ತತ್ತರಿಸುತ್ತಿದ್ದಾಗ, ಪ್ರಧಾನಿ ಮೋದಿಗೆ ಕರ್ನಾಟಕ ಕಾಣಲಿಲ್ಲ. ಆದರೆ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಪ್ರಧಾನಿ ಮೋದಿಗೆ ರಾಜ್ಯ ಕಾಣಿಸಲಾರಂಭಿಸಿದೆ ಎಂದು ಚಂದ್ರಶೇಖರ್ ಆರೋಪಿಸಿದರು.
ಪ್ರಧಾನಿ ನರೇಂದ್ರ ಮೋದಿ ರಾಜ್ಯ ವಿಧಾನಸಭೆ ಚುನಾವಣೆ ಆರಂಭವಾದಾಗಿನಿಂದ ಮಾರ್ಚ್ 2 ರಿಂದ ರಾಜ್ಯಕ್ಕೆ ಸುಮಾರು 22 ಬಾರಿ ಬಂದಿದ್ದಾರೆ. ದೆಹಲಿ ಬಿಟ್ಟು ಬೇರೆ ಕಡೆ ಪ್ರವಾಸ ಕೈಗೊಂಡು ಮೋದಿ ವೇದಿಕೆ ಕಾರ್ಯಕ್ರಮ ಮಾಡಿದಾಗ ಒಂದು ನಿಮಿಷಕ್ಕೆ 8 ಲಕ್ಷ 63 ಸಾವಿರ ರೂಪಾಯಿ ಖರ್ಚಾಗುತ್ತದೆ. ಜನರ ತೆರಿಗೆ ಹಣ ಅಪವ್ಯಯ ಮಾಡುತ್ತಿದ್ದರೆ. ಇದಕ್ಕೆ ಯಾರು ಹೊಣೆ ಎಂದು ಚಂದ್ರಶೇಖರ ಪ್ರಶ್ನಿಸಿದರು.
ಇದನ್ನೂ ಓದಿ : ಕಾಂಗ್ರೆಸ್ನಲ್ಲಿ ಅಪ್ರಮಾಣಿಕತೆ ಮತ್ತು ಅಭದ್ರತೆ ಕಾಡುತ್ತಿದೆ: ಸಿಎಂ ಬೊಮ್ಮಾಯಿ ಲೇವಡಿ
ರಾಜ್ಯಕ್ಕೆ ಈ ರೀತಿ ಪ್ರಧಾನಿ ಮೋದಿ ಬರುತ್ತಿರುವುದನ್ನು ನೋಡುತ್ತಿದ್ದಾರೆ. ಮೋದಿ ಅವರು ದೇಶದ ಪ್ರಧಾನಿಯೋ? ಅಥವಾ ಕರ್ನಾಟಕದ ಪ್ರಧಾನಿಯೋ? ಎಂಬುದು ತಿಳಿಯುತ್ತಿಲ್ಲ. ಬಿಜೆಪಿ ಆರ್ಎಸ್ಎಸ್ ಹೊಸ ಅಜೆಂಡಾ ತರಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿ. ಗುಜರಾತ್ ಈಸ್ಟ್ ಇಂಡಿಯಾ ಕಂಪನಿಯನ್ನು ಕರ್ನಾಟಕದಲ್ಲಿ ಸ್ಥಾಪನೆ ಮಾಡಲು ಬಿಜೆಪಿ ನಾಯಕರು ಹೊರಟಿದ್ದಾರೆ. ಈ ಮೂಲಕ ಕರ್ನಾಟಕವನ್ನ ತಮ್ಮ ತೆಕ್ಕೆಗೆ ತೆಗೆದುಕೊಳ್ಳಬೇಕು ಎನ್ನುವ ಹುನ್ನಾರ ನಡೆದಿದೆ ಎಂದು ಚಂದ್ರಶೇಖರ್ ಹೇಳಿದರು.
ಚುನಾವಣೆ ಹೊತ್ತಿನಲ್ಲಿ ರಾಜ್ಯ ಬಿಜೆಪಿ ನಾಯಕರು ಮೀಸಲಾತಿ ಗೊಂದಲ ಹುಟ್ಟುಹಾಕಿದ್ದಾರೆ. ರಾಜ್ಯ ಸರ್ಕಾರಕ್ಕೆ ಈ ರೀತಿ ಮೀಸಲಾತಿ ಹೆಚ್ಚಳ ಮಾಡುವ ಅಧಿಕಾರವಿಲ್ಲ. ಆ ಮೂಲಕ ರಾಜ್ಯ ಬಿಜೆಪಿ ನಾಯಕರು ಜನರ ಕಣ್ಣಿಗೆ ಮಣ್ಣೇರಚಿದ್ದಾರೆ. ಇನ್ನು ದಲಿತರ ಒಳಮೀಸಲಾತಿ ಅವರ ಊಟ ಮಾಡುವ ತಟ್ಟೆಯಲ್ಲಿ ವಿಷ ಬೆರಿಸಿದಂತೆ ಎಂದು ಚಂದ್ರಶೇಖರ್ ಬಿಜೆಪಿ ವಿರುದ್ದ ಕಿಡಿಕಾರಿದರು.
ಸಬ್ ಕೇ ಸಾಥ ಸಬ್ ಕೇ ವಿಕಾಸ್ ಎನ್ನುವ ಬಿಜೆಪಿ ಮುಸ್ಲಿಂರಿಂದ ಪ್ರತಿಶತ ನಾಲ್ಕರಷ್ಟು ಮೀಸಲಾತಿ ಕಿತ್ತುಕೊಂಡಿದ್ದು, ಯಾಕೆ? ಬಿಜೆಪಿ 224 ಕ್ಷೇತ್ರಗಳಲ್ಲಿ ಒಂದೇ ಒಂದು ಕ್ಷೇತ್ರದಲ್ಲಿ ಮುಸ್ಲಿಂ ಅಭ್ಯರ್ಥಿಗೆ ಸ್ಪರ್ಧಿಸಲು ಅವಕಾಶ ಕಲ್ಪಿಸಿಲ್ಲಾ. ಕಾಂಗ್ರೆಸ್ ಸರ್ಕಾರದ ಪ್ರಣಾಳಿಕೆ ಸುಟ್ಟು ಹಾಕಿರುವ ಕೆ.ಈಶ್ವರಪ್ಪ ಬ್ರೈನ್ ಸಂಪರ್ಕ ಸರಿಯಾಗಿಲ್ಲ ಎಂದು ಚಂದ್ರಶೇಖರ ಹೇಳಿದರು.
ಇದನ್ನೂ ಓದಿ : ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಮ್ಯಾಚ್ ಫಿಕ್ಸಿಂಗ್: ಸಿದ್ದರಾಮಯ್ಯ ಸತ್ಯ ಒಪ್ಪಿಕೊಂಡಿದ್ದಾರೆ ಎಂದ ಹೆಚ್ಡಿಕೆ