ರಾಣೆಬೆನ್ನೂರು: ಮಾನ್ಯ ಮೋದಿಯವರು ಹೇಳ್ತಿದ್ದಾರೆ, ದೇಶದ ಮುಸ್ಲಿಮರು ಹೆದರಬೇಡಿ ಎಂದು. ಆದ್ರೆ ನಾವು ಯಾರಿಗೂ ಹೆದರಲ್ಲ, ಆರ್ ಎಸ್ ಎಸ್ ನವರು ಗಾಂಧಿ ಜಯಂತಿ, ಅಂಬೇಡ್ಕರ್ ಜಯಂತಿ ಮಾಡಿದ್ದಾರಾ? ದೇಶದ ಧ್ವಜವನ್ನು ಎಂದಾದರೂ ಹಿಡಿದಿದ್ದಾರ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಮೋದಿಯವರಿಗೆ ಪ್ರಶ್ನೆ ಮಾಡಿದ್ದಾರೆ.
ನಗರದ ಮುನ್ಸಿಪಲ್ ಮೈದಾನದಲ್ಲಿ ಪ್ರಜಾಪ್ರಭುತ್ವ ಹಾಗೂ ಸಂವಿಧಾನ ರಕ್ಷಣಾ ಹೋರಾಟ ಸಮಿತಿ ಆಯೋಜಿಸಿದ ಸಿಎಎ ಮತ್ತು ಎನ್ ಆರ್ ಸಿ ವಿರೋಧ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಧರ್ಮದ ಆಧಾರದ ಮೇಲೆ ದೇಶ ಕಟ್ಟಲು ನಿಮ್ಮಿಂದ ಸಾಧ್ಯವಿಲ್ಲ ,ಇಸ್ಲಾಂ ಸಮುದಾಯ ಎಂದಿಗೂ ಮಾನವೀಯತೆ ಬಿಟ್ಟ ಧರ್ಮ ಅಲ್ಲ. ನಮಗೆ ಈಗ ಬಿಜೆಪಿಯವರು ಪಾಕಿಸ್ತಾನಕ್ಕೆ ಹೋಗಿ ಎಂದು ಹೇಳುತ್ತಿದ್ದಾರೆ, ಆದರೆ ನಾವು ಎಂದೂ ಪಾಕಿಸ್ತಾನಕ್ಕೆ ಹೋಗಿಲ್ಲ, ನಿಜವಾಗಿ ಪಾಕಿಸ್ತಾನಕ್ಕೆ ಹೋಗಿರೋದು ಪ್ರಧಾನಿ ಮೋದಿ ಎಂದರು.
ಬಿಜೆಪಿ ಪಕ್ಷದ ಹಿರಿಯ ಮುಖಂಡರಾದ ಎಲ್.ಕೆ. ಅಡ್ವಾಣಿಯವರು ಪಾಕಿಸ್ತಾನಕ್ಕೆ ಹೋಗಿದ್ದಕ್ಕೆ ಬಿಜೆಪಿಯಿಂದ ದೂರ ಇಟ್ಟಿದ್ದಾರೆ. ಆದರೆ ದೇಶದ ಪ್ರಧಾನ ಮಂತ್ರಿ ಮೋದಿಯನ್ನು ಯಾರೂ ಕೇಳುವಂತಿಲ್ಲ.ದೇಶದಲ್ಲಿ ಮುಸ್ಲಿಮರು ವಿಶ್ವಾಸದಿಂದ ಜೀವನ ಮಾಡುತ್ತಿದ್ದಾರೆ ಎಂದರು.