ಹಾವೇರಿ: ಕಾಂಗ್ರೆಸ್ ಮುಳುಗುತ್ತಿರುವ ಹಡಗು. ಅವರಿಗೆ ಉಸಿರಾಡಲು ಸ್ವಲ್ಪಾವಾದರೂ ಮತಹಾಕಿ ಎಂದು ಹಿರೇಕೆರೂರು ಬಿಜೆಪಿ ಅಭ್ಯರ್ಥಿ ಬಿ ಸಿ ಪಾಟೀಲ್ ವ್ಯಂಗ್ಯವಾಡಿದ್ದಾರೆ.
ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕು ಭೋಗಾವಿಯಲ್ಲಿ ಮಾತನಾಡಿವ ಅವರು, ನನಗೆ ಗ್ರಾಮದ ನೂರಕ್ಕೆ ನೂರರಷ್ಟು ಜನ ವೋಟು ಹಾಕುವುದು ಬೇಡ. ಶೇ.95 ರಷ್ಟು ಮತ ನನಗೆ ಹಾಕಿ. ಉಳಿದ ಶೇ. 5ರಷ್ಟು ಮತಗಳನ್ನು ಕಾಂಗ್ರೆಸ್‌ಗೆ ಹಾಕಿ. ಅವರೂ ಸ್ವಲ್ಪ ಉಸಿರಾಡಲಿ ಎಂದು ವ್ಯಂಗ್ಯವಾಡಿದರು.
ಉಪಚುನಾವಣೆಯಲ್ಲಿ ಅಧಿಕ ಮತ ಹಾಕುವ ಗ್ರಾಮವನ್ನ ದತ್ತು ತೆಗೆದುಕೊಳ್ಳುವುದಾಗಿ ಪಾಟೀಲ್ ತಿಳಿಸಿದರು. ಅಲ್ಲದೆ ಆ ಗ್ರಾಮಕ್ಕೆ 25 ಸಾವಿರ ರೂ. ನಗದು ಬಹುಮಾನ ನೀಡುವುದಾಗಿ ಹೇಳಿದ್ದಾರೆ.