ರಾಣೆಬೆನ್ನೂರು: ಬಿಜೆಪಿ ಪಕ್ಷದ ಅಭ್ಯರ್ಥಿ ಅರುಣಕುಮಾರ ಪೂಜಾರ ಅವರು ಒಟ್ಟು 1,10,00, 000ರೂ. ಆಸ್ತಿಯನ್ನು ಘೋಷಣೆ ಮಾಡಿದ್ದಾರೆ.
60,09,113 ರೂ. ಚರಾಸ್ಥಿ ಹಾಗೂ 25,00,000 ರೂ. ಸ್ಥಿರಾಸ್ತಿ ಹೊಂದಿದ್ದಾರೆ. ಇನ್ನು, ತಮ್ಮ ಸ್ವಂತ ಗ್ರಾಮವಾದ ಹರಿಹರ ತಾಲೂಕಿನ ಗುತ್ತೂರ ಗ್ರಾಮದಲ್ಲಿ 25,00,000 ಮೌಲ್ಯದ ಭೂಮಿಯನ್ನು ಹೊಂದಿದ್ದಾರೆ. ಇದರಲ್ಲಿ ಒಂದು ಇನ್ನೋವಾ ಕಾರ್, ರಾಯಲ್ ಎನ್ಫೀಲ್ಡ್ ಬೈಕ್ ಹಾಗೂ ಒಂದು ಟ್ರ್ಯಾಕ್ಟರ್ ಹೊಂದಿದ್ದಾರೆ. ತಮ್ಮ ಪತ್ನಿ ಮಂಗಳಗೌರಿ ಪೂಜಾರ ಅವರು 7,36, 900 ಚರಾಸ್ಥಿ ಹೊಂದಿದ್ದು, ಮಕ್ಕಳಾದ ದರ್ಶನ ಹಾಗೂ ಹರ್ಷಿತಾ ಹೆಸರಿನಲ್ಲಿ₹1ಲಕ್ಷ ಚರಾಸ್ಥಿ ಹೊಂದಿದ್ದಾರೆ.
ಇನ್ನು, ಕೈ ಸಾಲವಾಗಿ ಸುರೇಶ ಬೆಳಕೇರಿ ಎಂಬುವರ ಹತ್ತಿರ ₹30,00,000 ಸಾಲವನ್ನು ಪಡೆದುಕೊಂಡಿದ್ದಾರೆ. ಚೋಳಮಂಡಮ್ ಫೈನಾನ್ಸ್ ಒಳಗೆ 15,01,651 ರೂ. ಸಾಲವನ್ನು ಹೊಂದಿದ್ದಾರೆ. ಅರುಣಕುಮಾರ ಪೂಜಾರ ಮೇಲೆ ವಿವಿಧ ಠಾಣೆಯಲ್ಲಿ ಒಟ್ಟು ನಾಲ್ಕು ಪ್ರಕರಣಗಳು ದಾಖಲಾಗಿವೆ.