ETV Bharat / state

ಪಂಚಮಸಾಲಿ ವಚನಾನಂದ ಶ್ರೀಗಳ ಜನ್ಮದಿನ ಪ್ರಯುಕ್ತ ಬಡವರಿಗೆ ದಿನಸಿ ಕಿಟ್ ವಿತರಣೆ

ಕೊರೊನಾ ವೈರಸ್ ಹಿನ್ನೆಲೆಯಲ್ಲಿ ದೇಶದಾದ್ಯಂತ ಲಾಕಡೌನ್ ವಿಸ್ತರಿಸಲಾಗಿದೆ. ಇದರಿಂದ ಬಡವರು ಮತ್ತು ಕಾರ್ಮಿಕರಿಗೆ ಕೆಲಸವಿಲ್ಲದೆ ಜೀವನ ಸಾಗಿಸಲು ಕಷ್ಟವಾಗಿದೆ.

Birth Day of Panchamasali Vachanananda Sri: Distribution of Food Kit for the Poor
ಪಂಚಮಸಾಲಿ ವಚನಾನಂದ ಶ್ರೀಗಳ ಜನುಮ ದಿನ: ಬಡವರಿಗೆ ಆಹಾರ ಕಿಟ್ ವಿತರಣೆ
author img

By

Published : Apr 24, 2020, 4:18 PM IST

ಹಾವೇರಿ/ರಾಣೆಬೆನ್ನೂರು: ಹರಿಹರ ಪಂಚಮಸಾಲಿ ಗುರು ಪೀಠದ ಶ್ರೀಗಳಾದ ವಚನಾನಂದ ಸ್ವಾಮೀಜಿ ಹುಟ್ಟುಹಬ್ಬದ ಅಂಗವಾಗಿ ಬಡ ಕುಟುಂಬಗಳಿಗೆ ಆಹಾರ ಪದಾರ್ಥಗಳ ಕಿಟ್ ವಿತರಣೆ ಮಾಡಿದರು.

ರಾಣೆಬೆನ್ನೂರು ನಗರದ ನೇಕಾರ ಕಾಲೋನಿಯಲ್ಲಿ ಬಡ ನೇಕಾರ ಸಮುದಾಯಕ್ಕೆ ಪಂಚಮಸಾಲಿ ಗುರು ಪೀಠದ ವತಿಯಿಂದ ಆಹಾರ ಪದಾರ್ಥಗಳ ಕಿಟ್ ವಿತರಣೆ ಮಾಡಲಾಯಿತು.

ಬಳಿಕ ಮಾತನಾಡಿದ ಶ್ರೀಗಳು, ಕೊರೊನಾ ವೈರಸ್ ಹಿನ್ನೆಲೆಯಲ್ಲಿ ದೇಶದಾದ್ಯಂತ ಲಾಕಡೌನ್ ವಿಸ್ತರಿಸಲಾಗಿದೆ. ಇದರಿಂದ ಬಡವರಿಗೆ ಮತ್ತು ಕಾರ್ಮಿಕರಿಗೆ ಕೆಲಸವಿಲ್ಲದೆ ಜೀವನ ಸಾಗಿಸಲು ಕಷ್ಟವಾಗಿದೆ. ಇದರಿಂದ ನನ್ನ ಹುಟ್ಟುಹಬ್ಬದ ಪ್ರಯುಕ್ತ ಬಡವರಿಗೆ ಮಠದ ವತಿಯಿಂದ ಸುಮಾರು 2 ಲಕ್ಷ ರೂಪಾಯಿ ಮೌಲ್ಯದ ಆಹಾರ ಪದಾರ್ಥಗಳ ಕಿಟ್ ವಿತರಣೆ ಮಾಡಲಾಗುತ್ತಿದೆ ಎಂದರು.

ವಿತರಣೆ ಸಮಯದಲ್ಲಿ ಕಾಗಿನಲೆ ಗುರುಪೀಠದ ಶ್ರೀ ನಿರಂಜನಾನಂದ ಸ್ವಾಮೀಜಿ, ಶಾಸಕ ಅರುಣಕುಮಾರ್​​ ಪೂಜಾರ, ನಗರಸಭಾ ಸದಸ್ಯರಾದ ಮಲ್ಲಿಕಾರ್ಜುನ ಅಂಗಡಿ, ಸುಮಂಗಲಾ ಪಾಟೀಲ, ಚೋಳಪ್ಪ ಕಸವಾಳ ಹಾಜರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.