ರಾಣೆಬೆನ್ನೂರ: ರಸ್ತೆ ಬದಿ ತೆರಳುತ್ತಿದ್ದವನಿಗೆ ಹಿಂದಿನಿಂದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿಯೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ರಾಣೆಬೆನ್ನೂರ ತಾಲೂಕಿನ ಹಲಗೇರಿ ಗ್ರಾಮದಲ್ಲಿ ನಡೆದಿದೆ.

ತಾಲೂಕಿನ ಬೆನಕನಕೊಂಡ ಗ್ರಾಮದ ಗುಡ್ಡಪ್ಪ ತಿರಕಪ್ಪ ಮಣಗೇರ (36) ಮೃತಪಟ್ಟ ವ್ಯಕ್ತಿ. ರಾಣೆಬೆನ್ನೂರ ಪಟ್ಟಣದಿಂದ ತುಮ್ಮಿನಕಟ್ಟಿ ಗ್ರಾಮಕ್ಕೆ ಬೈಕ್ ಮೂಲಕ ತೆರಳುತ್ತಿದ್ದ ಮಹೇಶಬಾಬು ಸೇತೂರ ಎಂಬ ವ್ಯಕ್ತಿ ವೇಗದಿಂದ ಬಂದು ಗುಡ್ಡಪ್ಪನಿಗೆ ಡಿಕ್ಕಿ ಹೊಡೆದಿದ್ದಾನೆ. ಇದರಿಂದ ತೀವ್ರವಾಗಿ ರಕ್ತಸ್ರಾವಗೊಂಡ ಗುಡ್ಡಪ್ಪ ಸ್ಥಳದಲ್ಲಿ ಮೃತಪಟ್ಟಿದ್ದಾನೆ ಎನ್ನಲಾಗುತ್ತಿದೆ.
ಹಲಗೇರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.