ಹಾವೇರಿ: ಲಾಕ್ ಡೌನ್ ನಡುವೆಯೂ ಜಿಲ್ಲೆಯ ಸವಣೂರು ಪಟ್ಟಣದಲ್ಲಿ ದನದ ಮಾಂಸ ಮಾರಾಟ ಮಾಡಲಾಗ್ತಿತ್ತು. ಈ ಬಗ್ಗೆ ಖಚಿತ ಮಾಹಿತಿ ಅರಿತು ದಾಳಿ ನಡೆಸಿದ ತಹಶೀಲ್ದಾರ್ ಮಲ್ಲಿಕಾರ್ಜುನ ಹೆಗ್ಗಣ್ಣವರ ದನದ ಮಾಂಸ ಮಾರಾಟ ಮಾಡ್ತಿದ್ದವರಿಗೆ ಲಾಠಿ ಏಟಿನ ರುಚಿ ತೋರಿಸಿದ್ದಾರೆ.
ಈಗ ಎಲ್ಲೆಡೆ ಲಾಕ್ ಡೌನ್ ಇದೆ. ಮೊದಲು ಆರೋಗ್ಯ ನೋಡಿಕೊಳ್ಳಿ. ನಾಳೆಯಿಂದ ನೀವು ದನದ ಮಾಂಸ ಮಾರಾಟ ಮಾಡಿದ್ರೆ ಕೇಸ್ ಹಾಕಿ, ಒದ್ದು ಒಳಗೆ ಹಾಕ್ತೀವಿ. ಬೇಲ್ ಸಿಗದಂತೆ ಕೇಸ್ ಹಾಕ್ತೀವಿ ಎಂದು ತಹಶೀಲ್ದಾರ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ತಹಶೀಲ್ದಾರ್ ಜೊತೆ ತಂಡದಲ್ಲಿ ಸಿಪಿಐ ಶಶಿಧರ ಸೇರಿದಂತೆ ಕಂದಾಯ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ಇದ್ದರು.