ಹಾವೇರಿ: ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಈ ಹಿನ್ನೆಲೆ ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ, ತಮ್ಮ ಸ್ವಗೃಹದಲ್ಲಿಯೇ ಕೋವಿಡ್ ಕೇರ್ ಸೆಂಟರ್ ಆರಂಭಿಸಿದ್ದಾರೆ.
ಮನೆಯಲ್ಲಿರುವ ಸಭಾ ಭವನದಲ್ಲಿಯೇ 50 ಬೆಡ್ಗಳ ಕೇರ್ ಸೆಂಟರ್ ತೆರೆದಿದ್ದಾರೆ. ಈ ಎಲ್ಲಾ ಬೆಡ್ಗಳಿಗೂ ಆಕ್ಸಿಜನ್ ಕಾನ್ಸೆಂಟ್ರೇಟರ್ ಅಳವಡಿಸಲು ನಿರ್ಧರಿಸಿದ್ದು, ಉಪಕರಣ ಬಂದ ಬಳಿಕ ಸೋಂಕಿತರ ಸೇವೆಗೆ ಮುಕ್ತವಾಗಲಿದೆ.
ಈ ಕೇರ್ ಸೆಂಟರ್‌ಗಾಗಿ ವಿಶೇಷ ವೈದ್ಯರ ತಂಡ ಸಹ ರಚಿಸಲಾಗಿದೆ. ಸರ್ಕಾರಿ ಮತ್ತು ಖಾಸಗಿ ವೈದ್ಯರಿರುವ ತಂಡ ರಚಿಸಲಾಗಿದ್ದು, ಶಿಗ್ಗಾವಿ ಮತ್ತು ಸವಣೂರು ವಿಧಾನಸಭಾ ಕ್ಷೇತ್ರದ ಜನತೆ ಸಚಿವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.