ಹಾವೇರಿ : ಕರಾವಳಿ ಭಾಗದಲ್ಲಿನ ಕೊಲೆ ಪ್ರಕರಣಗಳು ಬಹಳ ನೋವು ತರುವ ಸಂಗತಿ. ಈ ರೀತಿಯ ಘಟನೆಗಳು ಸಂಭವಿಸಬಾರದು. ಇಂಟಲಿಜೆನ್ಸ್ನವರು ಈ ರೀತಿಯ ಘಟನೆಗಳ ಕುರಿತು ಇನ್ನಷ್ಟು ಎಚ್ಚರ ವಹಿಸಬೇಕು. ಆಗ ಮಾತ್ರ ಈ ದುಷ್ಕೃತ್ಯಗಳನ್ನು ತಡೆಯಲು ಸಾಧ್ಯ ಎಂದು ಎಂದು ವಿಧಾನಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಅಭಿಪ್ರಾಯಪಟ್ಟಿದ್ದಾರೆ.
ನಗರದಲ್ಲಿಂದು ಮಾತನಾಡಿದ ಅವರು, ಜಾತಿ-ಧರ್ಮಗಳು ಈ ವಿಚಾರದಲ್ಲಿ ಅಡ್ಡ ಬರಬಾರದು. ಸರ್ಕಾರ ಯಾರ ಮೇಲಾದರೂ ನಿರ್ಧಾಕ್ಷಿಣ್ಯದಿಂದ ಕ್ರಮ ಕೈಗೊಳ್ಳಬೇಕು. ಈ ರೀತಿ ಘಟನೆಗೆ ತುಂಬಾ ವರ್ಷಗಳ ನಂತರ ಶಿಕ್ಷೆ ಆದರೆ ಪ್ರಯೋಜನ ಇಲ್ಲ. ಕೂಡಲೇ ಕ್ರಮ ಕೈಗೊಳ್ಳುವಂತಾಗಬೇಕು. ಒಂದು ಅಪರಾಧಕ್ಕೆ 20 ಕ್ರಮಗಳನ್ನು ಅನುಸರಿಸುವಾಗ ವರ್ಷಗಳೇ ಕಳೆದು ಹೋಗುತ್ತದೆ ಎಂದರು.
ಶಿಕ್ಷೆಗೆ ಇಸ್ರೇಲ್ ಉದಾಹರಣೆ ಕೊಟ್ಟ ಹೊರಟ್ಟಿ : ಇಸ್ರೇಲ್ನಲ್ಲಿ ಬೆಳಗ್ಗೆ ಬಾಂಬ್ ಹಾಕಿದರೆ ರಾತ್ರಿ ಅವನನ್ನು ನೇಣಿಗೇರಿಸಿರುತ್ತಾರೆ. ಅಂತಹ ತ್ವರಿತಗತಿಯಲ್ಲಿ ನ್ಯಾಯ ದೊರೆತರೆ ಜನರಿಗೆ ಶಿಕ್ಷೆಯ ಬಗ್ಗೆ ನೆನಪಿರುತ್ತದೆ. ಅಪರಾಧವೂ ಕಡಿಮೆಯಾಗುತ್ತದೆ. ಈ ರೀತಿ ಕಾನೂನುಅನ್ನು ನಾವು ಮಾಡಬಹುದು. ಹೈದರಾಬಾದ್ನಲ್ಲಿ ನಮ್ಮ ಕ್ರೈಮ್ ವಿಭಾಗದ ಕಮೀಷನರ್ ಆಗಿದ್ದ ಸಜ್ಜನ್ ಅವರು ಶೂಟೌಟ್ ಮಾಡಿದ ರೀತಿ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ : ಸುರತ್ಕಲ್ ಫಾಜಿಲ್ ಹತ್ಯೆ ಕೇಸ್: ಹಣದಾಸೆಗೆ ಆರೋಪಿಗಳಿಗೆ ಕಾರು ನೀಡಿದ್ದ ಮಾಲೀಕ ಅರೆಸ್ಟ್